ಕಲ್ಲಡ್ಕ: ಶ್ರೀರಾಮ ಫ್ರೌಢಶಾಲೆಯ ವಿದ್ಯಾರ್ಥಿನಿ ಅನರ್ಘ್ಯ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆ.

Coastal Bulletin
ಕಲ್ಲಡ್ಕ: ಶ್ರೀರಾಮ ಫ್ರೌಢಶಾಲೆಯ ವಿದ್ಯಾರ್ಥಿನಿ ಅನರ್ಘ್ಯ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆ.

ಬಂಟ್ವಾಳ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರ ಬೆಂಗಳೂರು ಇದರ ಈಜುಕೊಳದಲ್ಲಿ ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ ರಾಜ್ಯಮಟ್ಟದ ಈಜು ಸ್ಪರ್ಧೆಗಳ 14 ವರ್ಷದೊಳಗಿನ ಹುಡುಗಿಯರ 200 ಮೀ ಬಟರ್ ಫ್ಲೈಯಲ್ಲಿ ಪ್ರಥಮ ಸ್ಥಾನ, 200 ಮೀ ವೈಯಕ್ತಿಕ ಮಿಡ್ಲೆ ಮತ್ತು 200 ಮೀಟರ್ ಬ್ಯಾಕ್ ಸ್ಟ್ರೋಕ್ ಗಳಲ್ಲಿ ತೃತೀಯ ಸ್ಥಾನ ಪಡೆದ ಕಲ್ಲಡ್ಕ ಶ್ರೀರಾಮ ಫ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಅನರ್ಘ್ಯ ಎ‌.ಆರ್.ರಾಷ್ಟ್ರ ಮಟ್ಟದ ಈಜು ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ.

ಇವರು ಮಂಗಳೂರಿನ ರೇಷ್ಮೆ ಇಲಾಖೆಯ ನಿವೃತ್ತ ನಿರೀಕ್ಷಕರಾದ ಬಿ.ಕೆ.ನಾಯ್ಕ್ ರವರ ಶಿಷ್ಯೆಯಾಗಿದ್ದು ಮಂಗಳೂರು ವಿ ವನ್

ಈಜು ತರಬೇತಿ ಕೇಂದ್ರದ ಮುಖ್ಯ ತರಬೇತಿದಾರರಾದ ಲೋಕರಾಜ್ ವಿಟ್ಲ ಮತ್ತು ಸ್ಯಾಂಜು ಇವರಿಂದ ತರಬೇತಿ ಪಡೆದಿರುತ್ತಾರೆ.

Leave a Comment