ಬಂಟ್ವಾಳ :ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ, ಕಾರ್ಗಿಲ್ ಯೋಧರ ದಿನಾಚರಣೆ, ಇಂಜಿನಿಯರ್ಸ್ ದಿನಾಚರಣೆ, ಶಿಕ್ಷಕರ ದಿನಾಚರಣೆ, ಛಾಯಾಗ್ರಾಹಕರ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆಯು ಬಹಳ ವಿಶಿಷ್ಟ ರೀತಿಯಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮೇಜರ್ ಡೊನರ್ ಡಾ ರಮೇಶಾನಂದ ಸೋಮಯಾಜಿ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಸಂಸ್ಥೆ ವತಿಯಿಂದ ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು ಇನ್ನು ಮುಂದೆಯೂ ಇಂತಹ ಒಳ್ಳೆಯ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು ಅತಿಥಿಗಳಾಗಿ ಎ ಜಿ ಲಾರೆನ್ಸ್ ಗೊನ್ಸಲೀಸ್ ,ಸುರೇಂದ್ರ ಕಿಣಿ, ಸತೀಶ್ ಕುಮಾರ್ ಕೆ, ಪದ್ಮನಾಭ ರೈ, ಶಾಂತರಾಜ್, ಮಧುಸೂದನ್, ಮುಂತಾದವರು ಭಾಗವಹಿಸಿದ್ದರು
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ರೋ ಗಣೇಶ್ ಶೆಟ್ಟಿ ಗೋಲ್ತಮಜಲ್ ರೋಟರಿ ಸಿಟಿ ಸಂಸ್ಥೆಯ ಸರ್ವ ಸದಸ್ಯರ ಸಹಕಾರದಿಂದ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಡೆಯಲು ಸಾಧ್ಯವಾಗಿದೆ ಎಂದರು
ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನೆಟ್ಲ ಗ್ರಾಮದ ಬಟ್ಯಪ್ಪ ಶೆಟ್ಟಿ ಇವರನ್ನು, ಕಾರ್ಗಿಲ್ ದಿನಾಚರಣೆ ಪ್ರಯುಕ್ತ ಯೋಧ ವಿದ್ಯಾದರ್ ಪೂಜಾರಿ ಇವರನ್ನು , ಇಂಜಿನಿಯರ್ಸ್ ದಿನಾಚರಣೆ
ಪ್ರಯುಕ್ತ ಪೃಥ್ವಿರಾಜ್, ಸುಧೀರ್ ಶೆಟ್ಟಿ, ಸುಪ್ರಿಯ ರಮೇಶ್, ಸಂದೀಪ್ ಶೆಟ್ಟಿ, ನಿಶಾಂತ್ ರೈ, ಸುಭಾಶ್ ರೈ, ಜ್ಯೋತ್ಸ್ನಾ ಗೌತಮ್, ಸೂರಜ್, ಇವರನ್ನು, ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಂಧ್ಯಾ ವಿದ್ಯಾಧರ್, ವಾಣಿ ಭಾಸ್ಕರ್ ರಾವ್, ವಿಜಯಲಕ್ಷ್ಮಿ, ಭಾರತಿ, ಟಿ ಶೇಷಪ್ಪ ಮೂಲ್ಯ, ಇವರನ್ನು, ಛಾಯಾಗ್ರಾಹಕರ ದಿನಾಚರಣೆಯ ಪ್ರಯುಕ್ತ ಚಿನ್ನ ಕಲ್ಲಡ್ಕ ಇವರನ್ನು,ವೈದ್ಯರ ದಿನಾಚರಣೆ ಪ್ರಯುಕ್ತ ಡಾ ರಮೇಶಾನಂದ ಸೋಮಯಾಜಿ, ಡಾ ಅಶ್ವಿನ್ ಸಾಗರ್, ಡಾ ವಾಮನ್ ನಾಯಕ್, ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮನೆ ಕಟ್ಟಲು ಹತ್ತು ಸಾವಿರ ಸಹಾಯಧನ ನೀಡಲಾಯಿತು. ರೋಗಿಗೆ ಡಯಾಲಿಸಿಸ್ ಬಗ್ಗೆ ಹದಿನೈದು ಸಾವಿರ ನೀಡಲಾಯಿತು ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಸಂಸ್ಥೆಗೆ 12 ನೂತನ ಸದಸ್ಯರು ಸೇರ್ಪಡೆಗೊಂಡರು ಟಿ ಶೇಷಪ್ಪ ಮೂಲ್ಯ ಹಾಗೂ ಭಾರತೀ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.















