ಬಂಟ್ವಾಳ :ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ ಬಂಟ್ವಾಳ ತಾಲೂಕು,ದ.ಕ.ದಿನಾಂಕ 04-08-2024 ಆದಿತ್ಯವಾರದಂದು ಅಮಾವಾಸ್ಯೆ ಇರುವುದರಿಂದ ಹಾಗೂ 09-08-2024 ಶುಕ್ರವಾರದಂದು ನಾಗರ ಪಂಚಮಿ ನಿಮಿತ್ತವಾಗಿ ಕ್ಷೇತ್ರದಲ್ಲಿ ಅಗೇಲು ಸೇವೆ ನಡೆಯುವುದಿಲ್ಲ ಹಾಗೂ ನಾಗದೇವರಿಗೆ 11 ಗಂಟೆಗೆ ನಾಗತಂಬಿಲ ಸೇವೆ ನಡೆಯುವುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.















