ಬಂಟ್ವಾಳ: ನೆರೆ ಪೀಡಿತ ಮಳೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಗುಂಡೂರಾವ್ ಭೇಟಿ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೆರವು.

Coastal Bulletin
ಬಂಟ್ವಾಳ: ನೆರೆ ಪೀಡಿತ ಮಳೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಗುಂಡೂರಾವ್ ಭೇಟಿ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೆರವು.

ಬಂಟ್ವಾಳ, ಆ. 2: ನಿರಂತರ ಸುರಿದ ಮಳೆಯ ಹಿನ್ನಲೆಯಲ್ಲಿ ತಾಲೂಕಿನಲ್ಲಿ ನೆರೆ ಬಂದು ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಪ್ರದೇಶಗಳಿಗೆ ಆ. 3ರಂದು ಶುಕ್ರವಾರ ಉಸ್ತುವಾರಿ ಸಚಿವ ಗುಂಡೂರಾವ್ ಭೇಟಿ ಪರಿಶೀಲಿಸಿದರು.

ಬಳಿಕ ಪತ್ರಕರ್ತರ ಜತೆಗೆ ಮಾತನಾಡಿ, ವಿಕೋಪದಿಂದ ಮನೆ ಕಳೆದುಕೊಂಡವರಿಗೆ 1.25 ಲಕ್ಷ ರೂ. ಪರಿಹಾರ ಮೊತ್ತದ ಜತೆಗೆ ವಿವಿಧ ವಸತಿ ನಿಗಮಗಳ ಯೋಜನೆಗಳನ್ನು ಸೇರಿಸಿಕೊಂಡು 5 ಲಕ್ಷ ರೂ. ನೆರವು ನೀಡುವ ಕುರಿತು ಅಧಿಕೃತ ಘೋಷಣೆಯಾಗಿದೆ. ಜತೆಗೆ ಭಾಗಶಃ ಹಾನಿಗೀಡಾದ ಮನೆಗೆ ನೀಡುತ್ತಿದ್ದ 6,500 ರೂ.ಗಳನ್ನು 50 ಸಾವಿರ ರೂ. ಗಳಿಗೆ ಏರಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಹಿಂದೆ ಮೂರು ರೀತಿಯಲ್ಲಿ ಪರಿಹಾರ ವಿತರಿಸಲಾಗುತ್ತಿದ್ದು, ಅದರಲ್ಲಿ ಸಾಕಷ್ಟು ನ್ಯೂನತೆಗಳಿತ್ತು. ಜತೆಗೆ ಅದನ್ನು ದುರ್ಬಳಕೆ ಮಾಡಿದ ಉದಾಹರಣೆಗಳೂ ಇವೆ. ವಿಕೋಪದ ಸಂದರ್ಭದಲ್ಲಿ ಜನರ ಪರವಾಗಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದ್ದೇವೆ ಎಂದರು. 

ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಿಲ್ಲ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಶೋಕ್ ಕಂದಾಯ ಸಚಿವರಾಗಿದ್ದಾಗ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ನಾವು

ಕೇಳಬೇಕಿದೆ. ತಾನು ಹಿಂದೆ ಜಿಲ್ಲಾ ಭೇಟಿ ನಿಗದಿ ಮಾಡಿದ್ದಾಗ ವಿಮಾನ ತಾಂತ್ರಿಕ ಸಮಸ್ಯೆಯಿಂದ ಭೇಟಿ ಸಾಧ್ಯವಾಗಲಿಲ್ಲ. ಬಳಿಕ ದಿಲ್ಲಿ ಭೇಟಿಯಲ್ಲಿದ್ದೆ ಎಂದರು. ತಾನು ದ.ಕ.ಜಿಲ್ಲಾಡಳಿತದ ಜತೆಗೆ ನಿರಂತರಸಂಪರ್ಕದಲ್ಲಿದ್ದು, ವೀಡಿಯೋ ಕಾನ್ಸರೆನ್ಸ್ ಮೂಲಕ ಸಭೆ ನಡೆಸುತ್ತಿದ್ದೇನೆ. ಪ್ರಾಕೃತಿಕ ವಿಕೋಪದ ಪರಿಹಾರ ಕೆಲಸಗಳು, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಈ ಹಿಂದೆಯೇ ಸಭೆಗಳನ್ನು ನಡೆಸಿದ್ದೆನೆ ಎಂದರು. ತುರ್ತು ಅಗತ್ಯ ಅನುದಾನ ಕೂಡ ಜಿಲ್ಲಾಧಿಕಾರಿಗಳ ಪಿಡಿ ಖಾತೆ ಯಲ್ಲಿದೆ. ಪ್ರತಿ ಗ್ರಾ.ಪಂ.ಗಳಿಗೂ ಹಣ ನೀಡಲಾಗಿದೆ. ತುರ್ತು ಕೆಲಸ ಗಳಿಗೆ ಶೀಘ್ರ ಅನುಮೋದನೆಗೂ ವ್ಯವಸ್ಥೆ ಮಾಡಿದ್ದೇವೆ. ಜಿಲ್ಲಾಡಳಿತ ಸಮರ್ಪಕವಾಗಿ ಸ್ಪಂದಿಸುತ್ತಿದೆ. ಜಿಲ್ಲಾಧಿ ಕಾರಿ, ಜಿ.ಪಂ.ಸಿಇಒ ಸಹಿತ ಎಲ್ಲ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. 

ಮಾಜಿ ಸಚಿವ ರಮಾನಾಥ ರೈ, ಜಿ.ಪಂ.ಮಾಜಿ ಸದಸ್ಯ ಪದ್ಮಶೇಖರ್ ಜೈನ್, ತಾ.ಪಂ. ಮಾಜಿ ಅಧ್ಯಕ್ಷ ಸುದರ್ಶನ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್ ಮತ್ತಿತರರು  ಉಪಸ್ಥಿತರಿದ್ದರು

Leave a Comment