ಮಂಗಳೂರು : ಮಹೇಂದ್ರ ಬೊಲೆರೋ ವಾಹನದಲ್ಲಿ ನಿಂಬೆ ಹಣ್ಣಿನ ಜೊತೆ ಗಾಂಜಾ ಪ್ಯಾಕೆಟ್ ಗಳನ್ನು ಇರಿಸಿಕೊಂಡು ಸಾಗಿಸುತ್ತಿದ್ದ ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ನಿವಾಸಿಗಳಾದ ಶಿಹಾಬುದ್ದೀನ್(32) ಮತ್ತು ಲತೀಫ್ (38) ಎಂಬವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ನಗರದ ಕೊಟ್ಟಾರ ಚೌಕಿಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕೇರಳ ನೋಂದಣಿಯ ಕೆಎಲ್ 79- 7130 ಸಂಖ್ಯೆಯ ಮಹೇಂದ್ರ ಬೊಲೆರೋ ಮ್ಯಾಕ್ಸಿ ಕ್ಯಾಬ್ ನಲ್ಲಿ ನಿಂಬೆ ಹಣ್ಣುಗಳನ್ನು ತುಂಬಿದ್ದ ಪ್ಲಾಸ್ಟಿಕ್
ಟ್ರೇಗಳಲ್ಲಿ ಗಾಂಜಾ ಪ್ಯಾಕೆಟ್ ಪತ್ತೆಯಾಗಿದೆ. ತಲಾ ಎರಡು ಕೆಜಿಯ ಗಾಂಜಾ ಸಂಗ್ರಹವಿದ್ದ 20 ಪ್ಯಾಕೆಟ್ ಗಳನ್ನು ಕೇರಳಕ್ಕೆ ಸಾಗಿಸುತ್ತಿರುವುದು ತಿಳಿದು ಮ್ಯಾಕ್ಸಿ ಕ್ಯಾಬ್ ವಾಹನ ವಶಕ್ಕೆ ಪಡೆದು ಅರೋಪಿಗಳನ್ನು ಬಂಧಿಸಿದ್ದಾರೆ















