ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ, ನಿಯಮಿತ. ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕೆ.ಎಂ.ಕೆ ಮಂಜನಾಡಿ, ಉಪಾಧ್ಯಕ್ಷರಾಗಿ ಉದಯ ಶಂಕರ ನಾಯ್ಕ ಟಿ. ಆಯ್ಕೆ.

Coastal Bulletin
ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ, ನಿಯಮಿತ. ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕೆ.ಎಂ.ಕೆ ಮಂಜನಾಡಿ, ಉಪಾಧ್ಯಕ್ಷರಾಗಿ ಉದಯ ಶಂಕರ ನಾಯ್ಕ ಟಿ. ಆಯ್ಕೆ.

ಮಂಗಳೂರು :ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ, ನಿಯಮಿತ ಮಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕೆ.ಎಂ.ಕೆ ಮಂಜನಾಡಿ, ಉಪಾಧ್ಯಕ್ಷರಾಗಿ ಉದಯ ಶಂಕರ ನಾಯ್ಕ ಟಿ. ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದಿಂದ ಚಂದ್ರಶೇಖರ್ ಸಿ.ಎಚ್, ದ.ಕ.ಜಿ.ಪಂ ಹಿ.ಪ್ರಾಶಾಲೆ ಉಚ್ಚಿಲಗುಡ್ಡೆ ಸೋಮೇಶ್ವರ. ಅಮರು ಹರಿಸಿಂಗ ಲಮಾಣಿ, (ಅಂಬರೀಶ್) ಕೊಲಕಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಂಜಿನಡ್ಕ ಮುಲ್ಕಿ. ಗೀತಾ ದ.ಕ.ಜಿ.ಪಂ.ಹಿ.ಪ್ರಾಶಾಲೆ, ರಾಜಗುಡ್ಡೆ ಹರೇಕಳ ಅಂಚೆ ಉಳ್ಳಾಲ. ತಿಪ್ಪೋಜಿ ಎಮ್ ವೈ. ಅನುದಾನಿತ ಗ್ರೀನ್ ವೀವ್ ಹಿರಿಯ ಪ್ರಾಥಮಿಕ ಶಾಲೆ ಕೋಣಾಜೆ. ರೀಟಾ ಡೇಸಾ, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಾಟಿಪಳ್ಳ-6 ಅಂಚೆ ಸುರತ್ಕಲ್ ಮಂಗಳೂರು, ವನಿತ, ৩.২.১০. ಕಿ.ಪ್ರಾಶಾಲೆ మిషనా ಹೈಸ್ಕೂಲ್ ರಸ್ತೆ ರಥಬೀದಿ ಮಂಗಳೂರು. ವಾಣಿ, ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಪಂಜಿಮೊಗರು ವಿದ್ಯಾನಗರ ಮಂಗಳೂರು.

ಪ್ರೌಢ ಶಾಲಾ ಶಿಕ್ಷಕರ ಕ್ಷೇತ್ರದಿಂದ- ಹಿಲ್ಲಾ ಕ್ಲಮೆನ್ಸಿಯಾ ಪಿಂಟೋ, ಸರಕಾರಿ ಪ್ರೌಢಶಾಲೆ ಮುಲ್ಲಕಾಡು ಮಂಗಳೂರು. ಮಾರ್ಕ್ ಜಿ. ಮೆಂಡೋನ್ಸಾ, ಕಿಲೆಂಜಾರು ಆರಮನೆ ಸರಕಾರಿ ಪ್ರೌಢಶಾಲೆ ಕುಪ್ಪೆಪದವು ಮಂಗಳೂರು. ಜಿ ಉಸ್ಮಾನ್, ಸರಕಾರಿ ಪ್ರೌಢಶಾಲೆ ಮುಲ್ಲಕಾಡು ಮಂಗಳೂರು.

ರಘುನಾಥ ಭಟ್ ಜಿ. ಕಿಟೆಲ್ ಮೆಮೊರಿಯಲ್ ಹೈಸ್ಕೂಲ್ ಗೋರಿಗುಡ್ಡ ಕಂಕನಾಡಿ ಮಂಗಳೂರು, ವಾಸುದೇವ ರಾವ್, ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢ ಶಾಲೆ ಬಜಪೆ ಮಂಗಳೂರು. ಎಮ್.ಎಸ್.ಮಹೇಶ್, ದ.ಕ.ಜಿ.ಪಂ. ಸರಕಾರಿ ಪ್ರೌಢಶಾಲೆ ಮಳಲಿ ಮಂಗಳೂರು.

ಪದವಿ ಪೂರ್ವ ಕ್ಷೇತ್ರದಿಂದ- ಪುಟ್ಟಸ್ವಾಮಿ ಆರ್. ಗಣಪತಿ ಪದವಿ ಪೂರ್ವ ಕಾಲೇಜು ಮಂಗಳೂರು, ರೂಪಾಕ್ಷ ಎಂ. ಬೆಸೆಂಟ್ ಪದವಿ ಪೂರ್ವ ಕಾಲೇಜು ಕೊಡಿಯಾಲ್ ಬೈಲ್ ಮಂಗಳೂರು. ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ನಿವೃತ್ತ ಶಿಕ್ಷಕರ ಕ್ಷೇತ್ರದಿಂದ ಪ್ರಭಾಕರ ಶೆಟ್ಟಿ ಸಿ.  ರವಿಕಲಾ ಕೆ. ಶೆಟ್ಟಿ, ಇವರು ನಿರ್ದೇಶಕರುಗಳಾಗಿ ಆಯ್ಕೆಯಾಗಿರುತ್ತಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್ ಜಿ. ಇವರು ಚುನಾವಣಾಧಿಕಾರಿಯಾಗಿ ಹಾಗೂ ಬಿ. ನಾಗೇಂದ್ರ ಅಧೀಕ್ಷಕರು, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಇವರು ಚುನಾವಣೆಯ ಸಹಾಯಕರಾಗಿ ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment