ಬಂಟ್ವಾಳ: ಕೆನರಾ ಇಂಜಿನಿಯರಿಂಗ್ ಕಾಲೇಜಿನ ಎ.ಐ.ಎಂ.ಎಲ್. ವಿಭಾಗವು ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಯೋಗದೊಂದಿಗೆ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಪ್ರಗತಿ ಮತ್ತು ಸೃಜನಶೀಲತೆ ಮತ್ತು ಸಂಶೋಧನಾತ್ಮಕ ಉತ್ತೇಜನ ನೀಡುವ ಐಡಿಯಾಥಾನ್ 2025 ಹಮ್ಮಿಕೊಂಡಿತ್ತು. 70ಕ್ಕೂ ಅಧಿಕ ಉತ್ಸಾಹೀ ವಿದ್ಯಾರ್ಥಿ ತಂಡಗಳು ಐಒಟಿ, ಮೊಬೈಲ್ ಅಪ್ಲಿಕೇಶನ್ಸ್, ವೆಬ್ ಡೆವಲಪ್ ಮೆಂಟ್ ಹೀಗೆ ಕೃಷಿ ಮತ್ತು ಆರೋಗ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ತಮ್ಮ ತಾಂತ್ರಿಕ ಚಿಂತನೆಗಳನ್ನು ಪ್ರಸ್ತುತ ಪಡಿಸಿದವು.
ಪ್ರಾಥಮಿಕ ಹಂತದಲ್ಲಿ ತಂಡಗಳು ತೀರ್ಪುಗಾರರ ಜತೆ ತಮ್ಮ ವಿಷಯವನ್ನು ಪ್ರದರ್ಶಿಸಿದರು. ಇಲ್ಲಿ ಆಯ್ಕೆಯಾದ ಹತ್ತು ಅತ್ಯುತ್ತಮ ಚಿಂತನೆಗಳನ್ನು ಕಾಲೇಜಿನ ಆಕೃತಿ 2025 ರ ವೇಳೆ ಹ್ಯಾಕಥಾನ್ ನಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಿ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.
ಭಾರತೀಯ ಸೈನ್ ಲಾಂಗ್ರೇಜ್ ಭಾಷಾಂತರ, ಪ್ಯೂಚುರಾ ವಾಚ್. ಅಡಿಕೆ
ವಿಂಗಡಣಾ ತಂತ್ರಜ್ಞಾನ, ಅಗ್ರಿಕನೆಕ್ಟ್, ಬಿ ನ್‌ಬೋಟ್ ಇತ್ಯಾದಿಗಳು ತೀರ್ಪುಗಾರರ ಗಮನ ಸೆಳೆದವು.ತಂಡಗಳ ತಾಂತ್ರಿಕ ಉತ್ಸಾಹ, ಕೌಶಲಗಳ ಕುರಿತು ಪ್ರಶಂಸೆ ವ್ಯಕ್ತವಾಯಿತು.
ಹಿರಿಯ ಉದ್ಯಮಿ ಆಕಾಶ್ ಎಂ. ಉದ್ಯಮ ರಂಗದ ಬೆಳವಣಿಗೆ, ಸವಾಲು, ಯಶಸ್ಸಿನ ಕುರಿತು ವಿವರಿಸಿದರು.ಕಾರ್ಯಕ್ರಮ ಸಂಯೋಜಕ ದಿವ್ಯೆಶ್ ದಿವಾಕರ್ ಉಪಸ್ಥಿತರಿದ್ದರು.















