Coastal Bulletin

ಬಂಟ್ವಾಳ :ದ ಕ ಜಿಲ್ಲಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ ನೆತ್ತರಕೆರೆ, ಇದರ ಶಾಲಾ ಪ್ರಾರಂಭೋತ್ಸವವು ಗುರುವಾರ ನಡೆಯಿತು. ಈ ಸಂದರ್ಭದಲ್ಲಿ ಈ ಶಾಲೆಯ ಹೆಮ್ಮೆಯ ವಿದ್ಯಾರ್ಥಿಯಾದ ಮುಂಡಾಜೆ ಗುತ್ತು ಚಿಕ್ಕ ರಾಜೇಂದ್ರ ಶೆಟ್ಟಿಯವರು ಕೊಡುಗೆಯಾಗಿ ಶಾಲೆಗೆ ನೀಡಿದ 5 ಕಂಪ್ಯೂಟರ್ಗಳನ್ನು ಅವರ ಸಹೋದರ ಶ್ರೀಯುತ ಮುಂಡಾಜೆ ಗುತ್ತು ಶ್ರೀ ಜ್ಯೋತಿಂದ್ರ ಶೆಟ್ಟಿಯವರು ಶಾಲೆಗೆ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ದಾಮೋದರ್ ನೆತ್ತರಕೆರೆ, ಶಾಲಾ ದತ್ತು ಸಮಿತಿ ಅಧ್ಯಕ್ಷರಾದ ಶ್ರೀ ಸುರೇಶ್ ಭಂಡಾರಿ ಅರ್ಬಿ, ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಗುಣರತ್ನ ಹಾಗೂ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

ಈ ಶಾಲೆಯ ವೈಶಿಷ್ಟ್ಯಗಳು,

ಸರಿ ಸುಮಾರು 1913 ರಲ್ಲಿ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ದ ನೆತ್ತರಕೆರೆಯ ದಂಡೆಯ ಮೇಲೆ  ಹುಟ್ಟಿಕೊಂಡ ವಿದ್ಯಾಸಂಸ್ಥೆಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ....ಶತಮಾನವನ್ನು ಪೂರೈಸಿಕೊಂಡ ತಾಲೂಕಿನ ಹೆಮ್ಮೆಯ ಈ  ಶಾಲೆಯು ಪ್ರಸಕ್ತ ವರ್ಷ ಹೆಚ್ಚಿನ ಮಕ್ಕಳ ದಾಖಲಾತಿಯನ್ನು ಹೊಂದು ತ್ತಿರುವುದು ನಮಗೆಲ್ಲ ಸಂತೋಷದ ವಿಚಾರವಾಗಿದೆ. ಒಂದು ಹಂತದಲ್ಲಿ ಮಕ್ಕಳ ಸಂಖ್ಯೆಯು ಕುಸಿಯುತ್ತಿದ್ದ ಹಂತದಲ್ಲಿ ಶಾಲೆಯನ್ನು ದತ್ತು ಪಡೆಯುವ ಮೂಲಕ  ಜಿಲ್ಲಾ ರಾಜ್ಯೋತ್ಸವ  ಪುರಸ್ಕೃತ  ಸ್ಥಳೀಯ  ಸೇವಾ ಸಂಸ್ಥೆಯಾದ ನವೋದಯ  ಮಿತ್ರ ಕಲಾ ವ್ರಂದ ವು ಶಾಲೆಯ ದಿಕ್ಕನ್ನೇ ಬದಾಲಾಯಿಸಿತು..LKG & UKG

ತರಗತಿಗಳ ಪ್ರಾರಂಭ, ನುರಿತ ಶಿಕ್ಷಕ ವೃಂದ ದಿಂದ ಗುಣಮಟ್ಟದ ಶಿಕ್ಷಣ,ಗೌರವ ಶಿಕ್ಷಕರ ನೇಮಕ,ಕಂಪ್ಯೂಟರ್ ಕಲಿಕೆಗೆ ಆದ್ಯತೆ,ಕನ್ನಡದೊಂದಿಗೆ ಇಂಗ್ಲಿಷ್ ಭಾಷೆ ಗೆ ಆದ್ಯತೆ,,ರಾಷ್ಟ್ರೀಯ ಹಬ್ಬಗಳ ಆಚರಣೆ, ಕ್ರೀಡಾಕೂಟಗಳ ಆಯೋಜನೆ, ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಈ ದತ್ತು ಸಂಸ್ಥೆಯು  ಮುಂಡಾಜೆಗುತ್ತು  ಕುಟುಂಬಸ್ಥರ ಸಹಕಾರದೊಂದಿಗೆ  ಸುಂದರವಾದ ಸಭಾಭವನ ,ತರಗತಿ ಕೊಠಡಿಗಳ ನಿರ್ಮಾಣ ದ ಮೂಲಕ ಶಾಲೆಯನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿದೆ... ವಿದ್ಯಾರ್ಥಿ ಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಇಲಾಖೆಯ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಈ ಶಾಲೆಯು ಪ್ರಸಕ್ತ ವರ್ಷ 200 ರ ದಾಖಲಾತಿಯೆಡೆಗೆ ಮುನ್ನುಗ್ಗುತ್ತಿರುವ  ಸಂತೋಷದ ವಿಚಾರವೇ ಸರಿ.

Leave a Comment