ಬಂಟ್ವಾಳ :ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ. ತುಂಬೆ ಇದರ ಆಶ್ರಯದಲ್ಲಿ ಶ್ರೀ ಶಾರದಾ ರಜತ ಮಹೋತ್ಸವ ಆಚರಣಾ ಸಮಿತಿಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಗಣೇಶ್ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಶ್ರೀ ಶಾರದಾ ಸಭಾ ಭವನ ತುಂಬೆಯಲ್ಲಿ ನಡೆಯಿತು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ ತುಂಬೆ ಅತಿಥಿಗಳನ್ನು ಸ್ವಾಗತಿಸಿ, ಸಮಿತಿ ರಚನೆಯ ಪ್ರಕ್ರಿಯೆಯನ್ನು ನಡೆಸಿದರು. ರಜತ ಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ವೈಷ್ಣವಿ ಬೊಳ್ಳಾರಿ ಇವರಿಂದ ಪ್ರಾರ್ಥನೆ ನಡೆಯಿತು, ಸುಶಾನ್ ಬೊಳ್ಳಾರಿ ಕಾರ್ಯಕ್ರಮ ನಿರೂಪಿಸಿದರು, ಸಂತೋಷ್ ಕೋಟ್ಯಾನ್ ವಂದಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷೆ ಶೋಭಾ ಗೋಪಾಲ್ ಮೈಂದಾನ್, ಕೋಶಾಧಿಕಾರಿ ಸೋಮಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.
ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು.
ಗೌರವಾಧ್ಯಕ್ಷರು ಕ್ಯಾಪ್ಟನ್ ಬ್ರಿಜೇಶ್ ಚೌಟ (ಸಂಸದರು, ದಕ್ಷಿಣ ಕನ್ನಡ ಜಿಲ್ಲೆ)
ಅಧ್ಯಕ್ಷರು ರಾಘವ ಬಂಗೇರ ಪೇರ್ಲಬೈಲ್ ಪ್ರಧಾನ ಕಾರ್ಯದರ್ಶಿ ಯೋಗೀಶ್ ಕೋಟ್ಯಾನ್ ಕುಮ್ಡೆಲ್. ಕಾರ್ಯಾಧ್ಯಕ್ಷರು ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಅನಿಲ್ ಪಂಡಿತ್ ವಳವೂರ್, ರಾಮಚಂದ್ರ ಸುವರ್ಣ ತುಂಬೆ, ಜಯಪ್ರಕಾಶ್
ತುಂಬೆ, ಉಮೇಶ್ ಶೆಟ್ಟಿ ಬರ್ಕೆ, ಕುಮುದಾಕ್ಷ ಕತಾರ್, ಜಗದೀಶ್ ಪೂಜಾರಿ ಕುಮ್ಡೆಲ್.
ಪ್ರಧಾನ ಸಂಚಾಲಕರು ತೇವು ತಾರಾನಾಥ ಕೊಟ್ಟಾರಿ,ಕೋಶಾಧಿಕಾರಿ ವಿನೋದ್ ಬೊಳ್ಳಾರಿ, ಸಂಘಟನಾ ಕಾರ್ಯದರ್ಶಿ ವಿಜಯ್ ಕುಮಾರ್ ಕಜೆಕಂಡ, ಜಗದೀಶ್ ಕಡೆಗೋಳಿ,
ಉಳಿದಂತೆ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಗೌರವ ಸಲಹೆಗಾರರು ಹಾಗು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಡೆಯಿತು.













