Coastal Bulletin

ಬಂಟ್ವಾಳ:ಹಿಂದೂ ಜಾಗರಣ ವೇದಿಕೆ ಶ್ರೀ ರಾಮ ಘಟಕ ಬೆಂಜನಪದವು ಮತ್ತು ಕಲಾ ಸಂಗಮ ಘಟಕ ನಡುಬೈಲ್ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಹಾಗೂ ಸಭಾ ಕಾರ್ಯಕ್ರಮವು ಮೇ 6ರಂದು ಶುಕ್ರವಾರ ಬೆಂಜನಪದವಿನ ರಾಮನಗರ ಮೈದಾನದಲ್ಲಿ ನಡೆಯಲಿದೆ.

ಅ ದಿನ ಸಂಜೆ 5ಕ್ಕೆ ಹೆಚ್ ಶಂಕರ ಭಟ್ ರವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಲಿದೆ,7ಗಂಟೆಗೆ ಮಹಾಪೂಜೆ ನಡೆದು,

ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 7.30ಯಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ನೃತ್ಯ ವೈವಿದ್ಯ ಕಾರ್ಯಕ್ರಮದ ನಡೆಯಲಿದೆ.

Leave a Comment