ಬಂಟ್ವಾಳ: ಬಿ. ಜನಾರ್ಧನ ಪೂಜಾರಿಯವರ ಅಭಿಮಾನಿ ಬಳಗ, ತುಂಬೆ ಇದರ ವತಿಯಿಂದ ಹಿರಿಯ ರಾಜಕಾರಣಿ ಎನ್.ಎ ಅಬ್ದುಲ್ಲಾ ಅವರನ್ನು ಅವರ ಗೂಡಿನಬಳಿ ನಿವಾಸದಲ್ಲಿ ಶನಿವಾರ ಸನ್ಮಾನಿಸಲಾಯಿತು.
ಪುದು ಗ್ರಾ.ಪಂ. ಮಾಜಿ ಅಧ್ಯಕ್ಷ ಅಖ್ತಾರ್ ಹುಸೈನ್ ಎಂ.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೆ ಪಕ್ಷ ಸಂಘಟನೆಗಾಗಿ ದುಡಿದ ಹಿರಿಯ ನಾಯಕರನ್ನು ಗುರುತಿಸಿ, ಗೌರವಿಸುವುದು ಶ್ಲಾಘನೀಯ ಕಾರ್ಯ ಎಂದರು.
ಪುದು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಶ್ರೀ ಭಗವತಿ ಕ್ಷೇತ್ರ ಕುದ್ರೋಳಿ ಇದರ ಆಡಳಿತ ಮೋಕೇಸ್ತರ
ಮೋನಪ್ಪ ಮಜಿಬೈಲು ತುಂಬೆ ಶುಭಾಶಂಸನೆಗೈದರು. ತುಂಬೆ ಗ್ರಾ.ಪಂ. ಸದಸ್ಯ ಗಣೇಶ್ ಸಾಲ್ಯಾನ್, ದೇವುದಾಸ್ ಪರ್ಲಕ್ಕೆ ತುಂಬೆ ಉಪಸ್ಥಿತರಿದ್ದರು.
ಸಾಮಾಜಿಕ ಕಾರ್ಯಕರ್ತ ಪಿ.ಎ ರಹೀಂ ಸ್ವಾಗತಿಸಿದರು. ಬಿ. ಜನಾರ್ದನ ಪೂಜಾರಿ ಅಭಿಮಾನಿ ಬಳಗದ ಸಂಚಾಲಕ ಎಮ್.ಕೆ ಖಾದರ್ ಮಾರಿಪಳ್ಳ ಪ್ರಾಸ್ತವಿಕವಾಗಿ ಮಾತನಾಡಿದರು. ಉಪ ಸಂಚಾಲಕ ಜಗದೀಶ್ ಗಟ್ಟಿ ತುಂಬೆ ವಂದಿಸಿದರು.














