ಮಂಗಳೂರು: ಉರ್ವಸ್ಟೋರಿನಲ್ಲಿರುವ ಸ್ವಸ್ತಿಕಾ ನ್ಯಾಶನಲ್ ಸ್ಕೂಲಿನಲ್ಲಿ 2ನೇ ಸ್ಟಾರ್ಟ ಅಪ್ 'ಸ್ವಸ್ತಿಕಾ ಅಕೌಂಟ ಮ್ಯಾನೇಜ್‌ಮೆಂಟ್ ಮತ್ತು ಮಾರ್ಕೆಟಿಂಗ್ ' ಇದೆ ಗುರುವಾರ ಏಪ್ರಿಲ್ 1 ರಂದು ಶುಭಾರಂಭಗೊಂಡಿತು.
ಉದ್ಘಾಟಕರಾಗಿ ಆಗಮಿಸಿದ ಶ್ರೀ ಶ್ರೀನಿವಾಸ ಕಾಮತರು (ಮ್ಯಾನೆಜಿಂಗ್ ಪಾರ್ಟನರ್,ಕಾಮತ್ & ರಾವು) ಮಾತನಾಡಿ, ಹೆಚ್ಚಿನ ವಿಧ್ಯಾರ್ಥಿಗಳು ಪದವಿ ಮುಗಿದ ನಂತರ ಉದ್ಯೋಗಕ್ಕೆ ಹೋರಾಟ ಮಾಡುತ್ತಾರೆ ಅದರ ಬದಲು ಹೀಗೆ ಓದುವ ಸಂಸ್ಥೆಯಲ್ಲಿಯೇ ಈರೀತಿಯ ಸ್ಟಾರ್ಟ ಅಪ್ ಇದ್ದರೆ ಮಂದೆ ಓದು ಮತ್ತು ತರಬೇತಿ ಜೊತೆ ಜೊತೆಯಾಗಿ ನಡೆದು ವಿಧ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿ ಬೆಳೆಯುತ್ತದೆ ಎಂದರು.
ಮುಖ್ಯ ಅತಿಥಿ ತುಂಬೆ ಪದವಿ ಪೂರ್ವ ಕಾಲೇಜು ನ ಪ್ರಿನ್ಸಿಪಾಲರಾದ ಗಂಗಾಧರ ಆಳ್ವರು, ಸಂಸ್ಧೆಯ ಅಧ್ಯಕ್ಷರಾದ ಡಾ| ರಾಘವೇಂದ್ರ ಹೊಳ್ಳರನ್ನು ಅಭಿನಂದಿಸುತ್ತಾ ನಾವು ಯಾವುದೇ ಉದ್ಯೋಗದಲ್ಲಿ ತೊಡಗಿದಾಗ ಅದರ ಬಗ್ಗೆ ಆಶಾವಾದವಿರಬೇಕು. ಕಠಿಣ ಪರಿಶ್ರಮ ಮುಖ್ಯ,. ಬರೇ ಸಂಬಳದ ಅಂಕಿಗಳನ್ನು ನೇಡದೆ ನಾವು ಮಾಡುವ ಉದ್ಯೇಗಕ್ಕೆ ಅಷ್ಟು ನ್ಯಾಯವನ್ನು ಒದಗಿಸತ್ತೇವೆಯೋ ಅದರಲ್ಲಿ ಸಫಲರಾಗುತ್ತೇವೆ. ನಮ್ಮ ಸಾಧನೆಯಲ್ಲಿ ಕೌಶಲ ಮಾತ್ರ ಮುಖ್ಯವಲ್ಲ
ಇಚ್ಚಾ ಶಕ್ತಿಯೂ ಮುಖ್ಯ ಎಂದು ಹೇಳಿದರು. ಯಾವುದೇ ಕೆಲಸ ಮಾಡುವಾಗ ಧನಾತ್ಮಕ ಯೋಚನೆ ಎರಬೇಕು, ನಾವು ಆದಷ್ಟೂ ಸೋಶಿಯಲ್ ಮೀಡಿಯಾ ದಿಂದ ದೂರವಿದು ನಮ್ಮ ಯೋಚನೆಯಲ್ಲೇ ಗುರಿ ಇಟ್ಟಾಗ ಖಂಡಿತಾ ಸಫಲರಾಗುತ್ತೇವೆ. ಇದೊಂದು ವಿಶಿಷ್ಟವಾದ ಸಂಸ್ಥೆ. ಇಲ್ಲಿ ಕಲಿಯುವ ವಿಧ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯುವಲ್ಲಿ ಖಂಡಿತಾ ಸಫಲರಾಗುತ್ತಾರೆಂದು ನಾನು ಅಭಿನಂದಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾದ ಡಾ| ರಾಘವೇಂದ್ರ ಹೊಳ್ಳರು ಮಾತನಾಡಿ ಇದು ಎರಡನೇ ಉದ್ಯೋಗಸಂಸ್ಥೆ, ಇದನ್ನು ಅಧ್ಯಾಪಕ ಮಿತ್ರರು ಮತ್ತು ವಿದ್ಯಾರ್ಥಿಗಳೇ ಸೇರಿ ಆಯೋಜಿಸಿ ಪ್ರಾರಂಭಿಸಿದರು.
ಸಂಸ್ಥೆಯ ಪ್ರಾಂಶುಪಾಲೆ ಡಾ| ಮಾಲಿನಿ ಎನ್. ಹೆಬ್ಬಾರ್ ಸ್ವಾಗತಿಸಿ. ವಿದ್ಯಾರ್ಥಿ ದೀಪ್ತಂ ವಂದಿಸಿದರು. ಅಧ್ಯಾಪಕಿ ಪೂಜಾ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಮೂರು ಜನ ವಿದ್ಯಾರ್ಥಿ ಪಾಲುದಾರರಾದ ದಿಪ್ತಂ. ಚೈತ್ರಾ ಮತ್ತು ಆಶಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.














