Coastal Bulletin

ಬಂಟ್ವಾಳ : ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು ಇದರ 51 ನೇ ವರ್ಷದ ಏಕಾಹ ಭಜನಾ ಮಹೋತ್ಸವಕ್ಕೆ ಜ.1 ರಂದು ಚಾಲನೆ ನೀಡಲಾಯಿತು.ಬೆಳ್ಳಿಗ್ಗೆ ಗಣಹೋಮ ದೊಂದಿಗೆ ಭಜನಾ ಸಂಕೀರ್ತನೆ ಪ್ರಾರಂಭಗೊಂಡಿತ್ತು.ಮಧ್ಯಾಹ್ನ 12.30 ಕ್ಕೆ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು.

ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಡಾ ಶ್ರೀ ಶ್ರೀ ಶ್ರೀ ಮಹರ್ಷಿ ಆನಂದ ಗುರೂಜಿ ಯವರ ದಿವ್ಯ ಉಪಸ್ಥಿತಿಯೊಂದಿಗೆ ಆಶೀರ್ವಚನವಿತ್ತರು.ಮುಖ್ಯ ಅತಿಥಿಗಳಾಗಿ,ಶ್ರೀ ಗೋಕರ್ಣನಾಥೆಶ್ವರ ಕ್ಷೇತ್ರ ಕುದ್ರೋಳಿ ಇದರ ಆಡಳಿತ ಮೊಕ್ತೇಸರರಾದ ಪದ್ಮರಾಜ್,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಸೇಸಪ್ಪ ಕೋಟ್ಯಾನ್,ಫರಂಗಿಪೇಟೆ ವೀರಾಂಜನೇಯ ದೇವಸ್ಥಾನ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಉಮೇಶ್ ಬರ್ಕೆ,ಭಜನಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾದ ಭುವನೇಶ್ ಪಚ್ಚಿನಡ್ಕ, ಆಡಳಿತ ಸಮಿತಿ ಅಧ್ಯಕ್ಷರಾದ ಶಶಿಧರ್ ಬ್ರಹ್ಮರಕೊಟ್ಲು, ವಸಂತಿ ಲೋಕನಾಥ್, ವಾರಿಜ ರಮೇಶ, ವೇದಿಕೆಯಲ್ಲಿ ಉಪಸ್ಥಿತರಿದ್ದರು,

 ಈ ಸಂದರ್ಭದಲ್ಲಿ, ಕಲಿಕೆಯಲ್ಲಿ ಉತ್ತಮ ಅಂಕಗಳನ್ನು

ಪಡೆದ ಪರಿಸರದ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಪುರಸ್ಕಾರಿಸಲಾಯಿತು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇಸಪ್ಪ ಕೋಟ್ಯಾನ್ ಹಾಗೂ ಪ್ರಿಯದರ್ಶಿನಿ ದರಿಬಾಗಿಲು ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಆಡಳಿತ ಸಮಿತಿಯ ಪ್ರ. ಕಾರ್ಯದರ್ಶಿ ನವೀನ್ ಎಸ್ ಬಂಗೇರ ಪಲ್ಲ ಸ್ವಾಗತಿಸಿ,ಭಜನಾ ಮಹೋತ್ಸವ ಸಮಿತಿಯ ಪ್ರ ಕಾರ್ಯದರ್ಶಿ ಕವಿರಾಜ್ ಚಂದ್ರಿಗೆ ಧನ್ಯವಾದವಿತ್ತರು. ಯತೀಶ್ ಶಂಭೂರು ಕಾರ್ಯಕ್ರಮ ನಿರ್ವಹಿಸಿದರು.

ಸಂಜೆ 6ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಭಾ ಕಾರ್ಯಕ್ರಮದ ನಂತರ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಇವರ ಅಭಿನಯದ "ಯಾನ್ ಉಲ್ಲೆತ್ತ" ಎಂಬ ತುಳು ನಾಟಕ ಪ್ರದರ್ಶನಗೊಂಡು ಜನ ಮನ ರಂಜಿಸಿತು.

Leave a Comment