ಬಂಟ್ವಾಳ : ಐತಿಹಾಸಿಕ ಏಳು ದಿವಸದ ಸಷ್ಟಿ ಜಾತ್ರೆಯ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿರುವ ತುಂಬೆ ರಾಮಲಕಟ್ಟೆಯಲ್ಲಿ ಅಂತಹ ವೈಭವದ ದಿನವನ್ನು ಮೆಲುಕು ಹಾಕುವ ಸಲುವಾಗಿ,ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ 42ವರ್ಷಗಳಿಂದ ಸೇವಾ ಚಟುವಟಿಕೆಗಳನ್ನು ಮಾಡುತ್ತಿರುವ ಎಳೆಯರ ಬಳಗ (ರಿ) ರಾಮಲ್ ಕಟ್ಟೆ ಹಾಗೂ ಎಳೆಯರ ಬಳಗ ಮಹಿಳಾ ಮಂಡಳಿಯು ಮೂರು ದಿನದ ವಾರ್ಷಿಕ ಪೂಜಾ ಮಹೋತ್ಸವ ಹಾಗೂ ವಾರ್ಷಿಕೋತ್ಸವನ್ನು ಜ.7 ರಿಂದ 9 ರವರೆಗೆ ಹಮ್ಮಿಕೊಂಡಿದೆ.
ಜ.7 ರಂದು ಬೆಳಗ್ಗೆ ವಾರ್ಷಿಕ ಪೂಜಾ ಮಹೋತ್ಸವ ವಾರ್ಷಿಕೋತ್ಸವದ ದೀಪ ಪ್ರಜ್ವಲನೆ ನಡೆಯಲಿದೆ ನಂತರ ,ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶ್ರೀ ಕೆ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಇವರಿಗೆ ಗೌರವಪೂರ್ವಕವಾಗಿ ಅಭಿನಂದನೆ ಮಾಡಲಿದ್ದಾರೆ.
ರಾತ್ರಿ 7 ಗಂಟೆಗೆ ಸರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆದ ಜೊತೆ ಹಲವು ಸಾಧಕರಿಗೆ ಸನ್ಮಾನ ನಡೆಯಲಿದ್ದು, ಶಾಸಕರಾದ ರಾಜೇಶ ನಾಯ್ಕ್, ಯು ಟಿ ಖಾದರ್ ಸಹಿತ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.ರಾತ್ರಿ 8 ಗಂಟೆ ಗೆ ಉಮೇಶ್ ಮಿಜಾರ್ ಇವರ ತಂಡದಿಂದ ಕುಸಾಲ್ದ ಗೊಬ್ಬು ಎಂಬ ತುಳು ಹಾಸ್ಯಮಯ
ನಾಟಕ ಇರಲಿದೆ.
ಜ.8 ರಂದು ಸ್ಥಳೀಯ ಅರಳು ಪ್ರತಿಭೆಗಳಿಂದ ಗೌಜಿದ ಗಮ್ಮತ್ ಕಾರ್ಯಕ್ರಮ ಇರಲಿದೆ. ರಾತ್ರಿ 8 ಗಂಟೆಗೆ ವಿದ್ಯಾರ್ಥಿ ಪುರಸ್ಕಾರ ಸಮಾರಂಭ ಜರಗಲಿದೆ. ರಾತ್ರಿ 8.30 ಕ್ಕೆ ಎಕ್ಸ್ಟ್ರೀಮ್ ಡ್ಯಾನ್ಸ್ ಕ್ರೀವ್ಸ್ ಬಿ.ಸಿ. ರೋಡ್ ವತಿಯಿಂದ ಡಾನ್ಸ್ ದಮಾಕ ನಡೆಯಲಿದೆ.
ಜ.9 ರಂದು ಸಂಜೆ 7.30 ರಿಂದ ಶ್ರೀ ಆದಿಶಕ್ತಿ ದೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ , ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಬ್ರಹ್ಮಕಲಶ ಎಂಬ ಯಕ್ಷಗಾನ ಬಯಲಾಟ ಹಾಗೂ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














