ಬಂಟ್ವಾಳ :ಅಕ್ಷಯ ಪಾತ್ರ ಫೌಂಡೇಶನ್, ಮಕ್ಕಳ ಹಸಿವನ್ನು ಹೋಗಲಾಡಿಸುವ ತನ್ನ ಅಚಲವಾದ ಕಾರ್ಯಕ್ಕೆ ಹೆಸರುವಾಸಿಯಾಗಿದ್ದು, ಮಂಗಳೂರಿನ ತನ್ನ ಕೇಂದ್ರೀಕೃತ ಅಡುಗೆಮನೆಯು ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಡಿ. 3 ರಂದು ಭಾನುವಾರ :ಉದ್ಘಾಟನೆಯೊಂದಿಗೆ ಮಹತ್ವದ ಮೈಲಿಗಲ್ಲು ತಲುಪಲಿದೆ.
ದಾನಿಗಳಾದ ಜಿಟಿ ಫೌಂಡೇಶನ್ ಮತ್ತು ದಿಯಾ ಸಿಸ್ಟಮ್ಸ್ (ಮಂಗಳೂರು) ಪ್ರೈ.ಲಿ. ಲಿಮಿಟೆಡ್‌ನ ವಿಜಯ್ ಮತ್ತು ಶಾಮ ಕೇಡಿಯಾ, ದಿವಂಗತ ಶ್ರೀ ಡಾ. ವಿ ರವಿಚಂದ್ರನ್ ಅವರ ನಿರಂತರ ಬೆಂಬಲ ಮತ್ತು ದೂರದೃಷ್ಟಿ ಕೊಡುಗೆಯೇ ಈ ಅಡುಗೆಮನೆಯಾಗಿದೆ.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಅತಿಥಿಗಳಾಗಿ ಕರ್ನಾಟಕ ವಿಧಾನಸಭಾಧ್ಯಕ್ಷರು ಮತ್ತು ಕರ್ನಾಟಕ ವಿಧಾನಸಭೆಯ ಸದಸ್ಯರಾದ ಯು.ಟಿ.ಖಾದರ್, ಮಂಗಳೂರು ಇವರು ಭಾಗವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಗ್ರೂಪ್‌ನ ಅಧ್ಯಕ್ಷರಾದ ಡಾ. ಪಿ ದಯಾನಂದ ಪೈ ಅವರು ಕೂಡ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್, ಡಾ. ಆನಂದ ಕೆ, ಐಎಎಸ್, ಸಿಇಒ, ದಕ್ಷಿಣ ಕನ್ನಡ
ಜಿಲ್ಲಾ ಪಂಚಾಯತ್ ಇವರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.
ಉಡುಪಿಯ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯವಿರಲಿದೆ. ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಧು ಪಂಡಿತ್ ದಾಸ ಮತ್ತು ಅಕ್ಷಯ ಪಾತ್ರ ಫೌಂಡೇಶನ್‌ನ ಉಪಾಧ್ಯಕ್ಷರಾದ ಶ್ರೀ ಚಂಚಲಪತಿ ದಾಸ ಅವರು ಉಪಸ್ಥಿತರಿರುತ್ತಾರೆ.
124 ಸರ್ಕಾರಿ ಮತ್ತು 41 ಸರ್ಕಾರಿ ಅನುದಾನಿತ ಸಂಸ್ಥೆಗಳು ಸೇರಿದಂತೆ 165 ಕ್ಕೂ ಹೆಚ್ಚು ಶಾಲೆಗಗಳಿಗೆ ಅಗತ್ಯ ಪೌಷ್ಟಿಕಯುತವಾದ 25,000 ಊಟವನ್ನು ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಈ ಅಡುಗೆಕೋಣೆ ರೂಪುಗೊಂಡಿದೆ. ಅಡುಗೆಮನೆಯ ವೈವಿಧ್ಯಮಯ ಮೆನುವು ಸಮತೋಲಿತ ಪೋಷಣೆಯನ್ನು ಖಾತ್ರಿಗೊಳಿಸುತ್ತದೆ. ಸೌರಶಕ್ತಿ ಮತ್ತು ಸ್ವಚ್ಛ ಎಲ್ ಪಿ ಜಿ ಯೊಂದಿಗೆ ಪರಿಸರಸ್ನೇಹಿ ಅಡುಗೆಮನೆ ಇದಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.














