ಬಂಟ್ವಾಳ :ಮಾನವೀಯ ಮೌಲ್ಯಗಳನ್ನು ತನ್ನಲ್ಲಿ ಬೆಳೆಸಿಕೊಂಡು ಎಳವೆಯಲ್ಲೇ ದೇಶಪ್ರೇಮ, ಪ್ರಾಣಿದಯೆ, ಸಹಕಾರ ಮನೋಭಾವನೆ, ಪರಿಸರ ಪ್ರೇಮವನ್ನು ಬೆಳೆಸಲು ಸ್ಕೌಟ್ಸ್ -ಗೈಡ್ಸ್ ಸಹಕಾರಿಯಾಗಿದೆ.ಎಂದು ಬಂಟ್ವಾಳ ತಾಲೂಕು ಸ್ಕೌಟ್ಸ್ ಗೈಡ್ಸ್ ಒಕ್ಕೂಟ ಅಧ್ಯಕ್ಷರಾದ ರೊಟೇರಿಯನ್ ಪ್ರಕಾಶ್ ಕಾರಂತ್ ಹೇಳಿದರು.
ಅವರು ಬಂಟ್ವಾಳ ತಾಲೂಕು ನೆಟ್ಲ ಮೂಡ್ನೂರು ಗ್ರಾಮದ ಏಮಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಘ ಮಾಣಿ ಇದರ 15 ನೇ ವರ್ಷದ ವಾರ್ಷಿಕ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕಬ್ಸ್, ಬುಲ್ ಬುಲ್ಸ್ ಉತ್ಸವದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆ ಮಾಣಿ ಇದರ ಅಧ್ಯಕ್ಷರಾದ ಪ್ರಹ್ಲಾದ್ ಜೆ ಕಾರ್ಯಕ್ರಮದ ಆತಿತ್ಯ ವಹಿಸಿದ ಏಮಾಜಿ ಶಾಲೆಗೆ ಸ್ಥಳೀಯ ಸಂಸ್ಥೆಯ ವತಿಯಿಂದ ರೂ 25 ಸಾವಿರದ ಚೆಕ್ಕನ್ನು ಶಾಲಾಅಭಿವೃದ್ಧಿ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸಿ ನಮ್ಮ ನಿರೀಕ್ಷೆಗೂ ಮೀರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಶಾಲೆಗೆ ಸಂಬಂಧಪಟ್ಟ ಎಲ್ಲರಿಗೂ ಆಭಾರಿಗಳಾಗಿದ್ದೇವೆ ಎಂದರು.ಹಾಗೂ ಬರುವ ವರ್ಷದ ರ್ರ್ಯಾಲಿ ನಡೆಸುವ ಜವಾಬ್ದಾರಿಯನ್ನು ಅನಂತಾಡಿ ಸರಕಾರಿ ಪ್ರಾಥಮಿಕ ಶಾಲೆಗೆ ಸ್ಕೌಟ್ ಧ್ವಜವನ್ನು ಶಾಲಾ ಶಾರೀರಿಕ ಶಿಕ್ಷಕರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪ್ರಸೂತಿ ಪರಿಣತೆ ಪೂವಕ್ಕ ಪೂಂಜ ಕರಿಂಕ ಹೊಸವಕ್ಲು, ಡಾಕ್ಟರ್ ಅಶ್ವಿನ್ ಆಳ್ವ ಗ್ಯಾಸ್ಟ್ರೋ ಸರ್ಜನ್ ಎಜೆ ಸಂಶೋಧನ ಕೇಂದ್ರ ಮಂಗಳೂರು, ಭಾರತೀಯ ಸೇನೆಯ ನಿವೃತ್ತ ಯೋಧ ಮೋಹನ್ ಗೌಡ ಕೊಂಕಣ ಕೂಡಿ ಮೊದಲಾದವರನ್ನು ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕು ಮಟ್ಟದ ಉತ್ತಮ ಶಿಕ್ಷಕ
ಪ್ರಶಸ್ತಿ ಪಡೆದ ಉಮ್ಮರಗಿ ಶರಣಪ್ಪ ಹಾಗೂ ಸ್ಕೌಟಲ್ಲಿ ಸೇವೆ ಸಲ್ಲಿಸುತ್ತಾ ಮಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಇವರನ್ನು ಸನ್ಮಾನಿಸಲಾಯಿತು.
ಕಳೆದ ಅವಧಿಯಲ್ಲಿ ಮಾಣಿ ವಲಯದ ಶಾಲೆಗಳಲ್ಲಿ ಸ್ಕೌಟ್ಸ್ - ಗೈಡ್ಸ್ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ಶಿಕ್ಷಕರನ್ನು ಅಭಿನಂದಿಸಲಾಯಿತು. ವಿವಿಧ ವಿಷಯಗಳಲ್ಲಿ ಸಾಧನೆ ತೋರಿದ ಸ್ಕೌಟ್ಸ್ ಗೈಡ್ಸ್ ಕಬ್ಸ್, ಬುಲ್ ಬುಲ್ಸ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ನೆಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಮಿತಾ ಡಿ ಪೂಜಾರಿ, ಉಪಾಧ್ಯಕ್ಷರಾದ ಸಚ್ಚಿದಾನಂದ, ಸದಸ್ಯರಾದ ಧನಂಜಯ ಗೌಡ,ಶಕೀಲಾ ಕೃಷ್ಣ ಮಿತ್ತ ಕೋಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾ ಗಣೇಶ್, ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ,ಭಾರತ್ ಗೌಸ್ ಗೈಡ್ಸ್ ನ ರಾಜ್ಯ ಸಂಘಟನಾ ಆಯುಕ್ತರಾದ ಭರತ್ ರಾಜ್,ಜಿಲ್ಲಾ ಕಾರ್ಯದರ್ಶಿ ಎಂ ಜೆ ಕಜೆ, ಪಾಣೆಮಂಗಳೂರು ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಜಯಂತ್ ನಾಯಕ್, ಕಬಕ ಜೂನಿಯರ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೇಮಲತಾ,ಸ್ಕೌಟ್ಸ್ ಗೈಡ್ಸ್ ರ್ರ್ಯಾಲಿ ನಿರ್ದೇಶಕರಾದ ಏಮಾಜೆ ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಮೊದಲಾದವರು ಉಪಸ್ಥಿತರಿದ್ದರು.
ಮಾಣಿ ಕರ್ನಾಟಕ ಪ್ರೌಢಶಾಲೆ ಮಕ್ಕಳು ಪ್ರಾರ್ಥಿಸಿ, ಶಿಕ್ಷಕಿ ಶ್ಯಾಮಲ ಕೆ ಸ್ವಾಗತಿಸಿ, ಕಾರ್ಯದರ್ಶಿ ಉಮ್ಮರಗಿ ಶರಣಪ್ಪ ವಂದಿಸಿದರು. ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಸುಪ್ರಿಯ ಕಾರ್ಯಕ್ರಮ ನಿರೂಪಿಸಿದರು














