ಬಂಟ್ವಾಳ :ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡ್ಮಾಣ್ ಇಲ್ಲಿ ಎಂ ಆರ್ ಪಿ ಎಲ್ ಪ್ರಯೋಜಕತ್ವದ ಸಿ.ಎಸ್.ಆರ್ ಫಂಡ್ ನೆರವಿನಿಂದ ರೂ 10 ಲಕ್ಷ ವಿಶೇಷ ಅನುದಾನ ದಿಂದ ನಿರ್ಮಾಣಗೊಂಡ ನೂತನ ಶೌಚಾಲಯವನ್ನು ಮೇರಮಜಲು ಗ್ರಾ. ಪಂ ಅಧ್ಯಕ್ಷ ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ ಅ. 30ರಂದು ಗುರುವಾರ ಉದ್ಘಾಟಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ್ ರಾವ್ ದೀಪ ಬೆಳಗಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಟ್ಟಡ ಗುತ್ತಿಗೆದಾರರಾದ ಸಂತೋಷ್ ಕೊಡ್ಮಾಣ್ ಇವರನ್ನು ಶಾಲೆಯ ಶಿಕ್ಷಕ ವೃಂದದವರು ಸನ್ಮಾನಿಸಿದರು.
ವೇದಿಕೆಯಲ್ಲಿ ಮೆರಮಜಲು ಗ್ರಾ.ಪಂ ನಿಕಟ ಪೂರ್ವ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಕೊಟ್ಟಿoಜ, ಗ್ರಾ
ಪಂ ಸದಸ್ಯರಾದ ಹರಿಣಾಕ್ಷಿ ಆರ್ ಬಂಗೇರ, ಭವಾನಿ ಶಂಕರಿ, ಸುಲೋಚನಾ ಕಾಂತಪ್ಪ ಶೆಟ್ಟಿ, ಯಾದವ ಶೆಟ್ಟಿಗಾರ್, ಹರೀಶ್ ಕುಮಾರ್ ಕಲ್ಲಜಾಲ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಾಧವಿ ಶೆಟ್ಟಿ ಉಪಸ್ಥಿತರಿದ್ದರು.
ಡೋರಿನ್ ಟೀಚರ್ ಸ್ವಾಗತಿಸಿ,ಪ್ರೇಮಾ ಟೀಚರ್ ವಂದಿಸಿದರು, ರೋಜಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು, ಬಳಿಕ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು.















