Coastal Bulletin

ಉಡುಪಿ :ಕೊರೋನಾ ಎರಡನೇ ಅಲೆಯಿಂದ ಎಚ್ಚೆತ್ತುಕೊಂಡಿರುವ ಜನರು ಮೂರನೇ ಅಲೆ ಅಪ್ಪಳಿಸುವ ಮೊದಲೇ ವ್ಯಾಕ್ಸಿನ್ ಪಡೆದು ಸೇಫ್ ಆಗೋ ಯೋಚನೆಯಲ್ಲಿದ್ದಾರೆ.ಲಸಿಕೆ ಪಡೆಯೋಣ ಅಂತ ಕೋವಿನ್ ಆಪ್ ನಲ್ಲಿ ನೋಂದಣಿ ಮಾಡಿಸಿ ಲಸಿಕೆ ಕೇಂದ್ರಗಳಿಗೆ ತೆರಳಿದರೆ ಲಸಿಕೆ ಖಾಲಿ ಅಂತ ಮನೆಗೆ ಕಳುಹಿಸುತ್ತಿದ್ದಾರೆ.ಹೀಗಾಗಿ ಲಸಿಕೆ ಕೇಂದ್ರಗಳಿಗೆ ಜನ ಪ್ರತಿನಿತ್ಯ ರೌಂಡ್ ಹಾಕಬೇಕಾದ ಪರಿಸ್ಥಿತಿ ಎದುರಾಗಿದೆ.ಆದ್ರೆ ಇದೇ ಸಮಸ್ಯೆಗೆ ಸಮಸ್ಯೆಯಿಂದ ಪರದಾಡಿದ ಯುವಕನೊಬ್ಬ ಸಮಸ್ಯೆಗೆ ಪರಿಹಾರ ಒಂದನ್ನ ಕಂಡುಹಿಡಿದಿದ್ದಾರೆ.

ರಾಮದಾಸ್ ಎಂಬ ಯುವಕನೊಬ್ಬ ಲಸಿಕೆ ಪಡೆಯಲು ತಮಗಾದ ತೊಂದರೆಯಿಂದಲೂ ಪ್ರೇರಣೆಗೊಂಡು ಸಮಸ್ಯೆಗೆ ಪರಿಹಾರ ಕಂಡು ಹಿಡಿದ್ದಾರೆ.ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿರುವ ಇವರು ಬೆಂಗಳೂರಿನ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಸದ್ಯ ಲಾಕ್ಡೌನ್ ಕಾರಣ ಊರಲ್ಲಿರುವ ರಾಮದಾಸ್ ಪೋಷಕರಿಗೆ ಲಸಿಕೆ ಹಾಕಲು ಪರದಾಡಿದ್ದಾರೆ ಕೊನೆಗೆ ಇದಕ್ಕೊಂದು ಪರಿಹಾರ ಕಂಡುಹಿಡಿಯಲು ನಿರ್ಧರಿಸಿದ ರಾಮದಾಸ್ ಹಾಗೂ ಅವರ ಭಾವ ಕಾರ್ತಿಕ್ ಜೊತೆಗೂಡಿ ಹೊಸ ಆಪ್ ರಚಿಸಿದ್ದಾರೆ.



15 ದಿನಗಳಲ್ಲಿ ರಾಮ್‌ದಾಸ್ ಹಾಗೂ ಕಾರ್ತಿಕ್ ಅಪ್ಲಿಕೇಶನ್ ಸಿದ್ಧಪಡಿಸಿದ್ದಾರೆ. ಈ ಆ್ಯಪ್‌ ಮೂಲಕವೇ ವ್ಯಾಕ್ಸಿನ್ ಲಭ್ಯತೆ ಪತ್ತೆ ಹಚ್ಚಿ ಸುಲಭವಾಗಿ ವ್ಯಾಕ್ಸಿನ್ ಪಡೆಯಬಹುದಾಗಿದೆ. ಈ ಆ್ಯಪ್ ಹೆಸರು 'ವಿ ಟ್ರ್ಯಾಕ್' ಎಂಬುದಾಗಿದ್ದು, ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ಲೇ ಸ್ಟೋರ್ ನಲ್ಲಿ ಅಪ್ ಡೌನ್ಲೋಡ್ ಮಾಡಿಕೊಂಡು ನೀವು ವಾಸವಿರುವ

ಸ್ಥಳದ ಪಿನ್ ಕೋಡ್ ಹಾಗೂ ವ್ಯಾಕ್ಸಿನ್ ಪಡೆದುಕೊಳ್ಳಲು ಇರುವ ಕೇಂದ್ರ ಆಯ್ಕೆ ಮಾಡಿದರೆ ಆ ಕೇಂದ್ರದಲ್ಲಿನ ವ್ಯಾಕ್ಸಿನ್  ಲಭ್ಯತೆ ಬಗ್ಗೆ ಮೊಬೈಲ್ ಗೆ ನೋಟಿಫಿಕೇಶನ್ ಬರಲಿದೆ ಹಾಗೆ ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿದರೆ ಓದೋವರೆಗೂ ಅಲರಾಮ್ ಬರಲಿದೆ.ನಿಮ್ಮ ಬೆರಳ ತುದಿಯಲ್ಲಿ ಲಸಿಕೆ ಲಭ್ಯತೆಯ ಮಾಹಿತಿ ಸಿಗಲಿದೆ.ಹೀಗಾಗಿ ಆ್ಯಪ್ ಮೂಲಕ ಬುಕ್ ಆಯ್ಕೆ ಮಾಡಿದರೆ ನೇರವಾಗಿ ಕೋವಿನ್ ಆ್ಯಪ್‌ನಲ್ಲಿ ರಿಜಿಸ್ಟರ್ ಆಗುತ್ತೆ ಈ ಮೂಲಕ ಸುಲಭವಾಗಿ ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ. ಸದ್ಯ 1 ಸಾವಿರಕ್ಕೂ ಅಧಿಕ ಮಂದಿ ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.‌

ಸಮಸ್ಯೆಯೆಂದರೆ ಸರ್ಕಾರಕ್ಕೆ ಶಾಪ ಹಾಕುವುದು ಸಾಮಾನ್ಯ ಆದರೆ ಸಮಸ್ಯೆ ಪರಿಹಾರದ ಬಗ್ಗೆ ಆಲೋಚಿಸಿ ಅದನ್ನ ಕಾರ್ಯಗತಗೊಳಿಸಿದ ಯುವಕರ  ಕೆಲಸ ನಿಜಕ್ಕೂ ಮಾದರಿ.ವಿ ಟ್ರಾಕ್ ಆಪ್ ನಿಂದ ಲಸಿಕೆ ಕಿರಿಕಿರಿ ಕಡಿಮೆಯಾಗಿ ಎಲ್ಲರೂ ಸುಲಭವಾಗಿ ಲಸಿಕೆ ಪಡೆಯುವಂತಾಗಲಿ.

Leave a Comment