Coastal Bulletin

ದೆಹಲಿ :ದೆಹಲಿಯ ಫರ್ಶ್ ಬಜಾರ್‌ ಪ್ರದೇಶದ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಫೋಟ ಸಂಭವಿಸಿದ್ದು, ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.ಮುನ್ನಿ ದೇವಿ(45), ನರೇಶ್(22), ಓಂಪ್ರಕಾಶ್(20) ಮತ್ತು ಸುಮನ್(18) ಮೃತ ದುರ್ದೈವಿಗಳು.

ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗರ್ಗ್ ಘಟನೆ ಮಾಹಿತಿ ನೀಡಿ ಈ ಬಗ್ಗೆ ನಮಗೆ ಮಂಗಳವಾರ ತಡರಾತ್ರಿ ಸುಮಾರು 12.15ಕ್ಕೆ ಕ್ಕೆ ಕರೆ ಬಂದಿದೆ. ತಕ್ಷಣವೇ 9 ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ತೆರಳಿದೆ.

ಸಿಲಿಂಡರ್‌ ಸ್ಪೋಟದಿಂದಾಗಿ ಮನೆಯ ಮೇಲ್ಬಾವಣಿಯ ಒಂದು ಭಾಗ ಕುಸಿದಿದ್ದು ಸಿಲಿಂಡರ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ.ಹೊಗೆಯಿಂದಾಗಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇನ್ನೊಬ್ಬ ವ್ಯಕ್ತಿಗೆ ಶೇಕಡ 25ರಷ್ಟು ಸುಟ್ಟ ಗಾಯಗಳಾಗಿವೆ. ಅವರನ್ನು ಹೆಗ್ಡೆವಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಹೇಳಿದ್ದಾರೆ.

Leave a Comment