ಉಳ್ಳಾಲ:ಆಗಸ್ಟ್ 29 ಗೋಕುಲಾಷ್ಟಮಿ ಹಿಂದಿನ ಸಂಜೆ ಉಳ್ಳಾಲದಲ್ಲಿ ಮೇಯುತಿದ್ದ ಜಾನುವರೊಂದನ್ನು ಗುಂಡಿಕ್ಕಿ ಕೊಂದ ಅಮಾನುಷ ಕೃತ್ಯವನ್ನು ವಿಶ್ವ ಹಿಂದು ಪರಿಷತ್ - ಬಜರಂಗದಳ ತೀವ್ರವಾಗಿ ಖಂಡಿಸಿದೆ
ನೈಜ ಆರೋಪಿಗಳನ್ನು ಬಂಧಿಸಿ ನೂತನ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಹಾಗು ಸಂರಕ್ಷಣಾ ಕಾಯಿದೆ 2020 ಪ್ರಕಾರವಾಗಿ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೆ ಅಕ್ರಮ ಬಂದೂಕಿನಿಂದ ಗುಂಡಿಕ್ಕಿ ಕೊಂದಿರುವ ನಡೆದಿರುವ ಈ ಕೃತ್ಯ ಇಡೀ ಜಿಲ್ಲೆಯನ್ನು ಆತಂಕಕ್ಕೆ ಗುರಿಮಾಡಿದೆ.
ಈ ಮಾರಾಕಾಸ್ತ್ರದ ಬಗ್ಗೆ ವಿಶೇಷ ತನಿಖೆ ನಡೆಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷದ್ ಜಿಲ್ಲಾ ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪುವೆಲ್ ಮತ್ತು ಬಜರಂಗದಳ ಜಿಲ್ಲಾ ಗೋರಕ್ಷಾ ಪ್ರಮುಖ್ ಪವಿತ್ರ್ ಕೆರೆಬೈಲ್ ಸರಕಾರವನ್ನು ಮತ್ತು ಪೊಲೀಸ್ ಇಲಾಖೆಯನ್ನು ಅಗ್ರಹಿಸಿದರು















