Coastal Bulletin

ಬೆಂಗಳೂರು :ಪ್ರಾಥಮಿಕ ಶಾಲೆಗಳ ಆರಂಭ ಹಾಗೂ ಸಾರ್ವಜನಿಕವಾಗಿ ಗಣೇಶೋತ್ಸವಕ್ಕೆ ಅನುಮತಿ ಬಗ್ಗೆ ಇಂದು ಸರ್ಕಾರ ನಿರ್ಧಾರಕೈಗೊಳ್ಳಲಿದೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕೋವಿಡ್ ತಾಂತ್ರಿಕ ತಜ್ಞರ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಕೈಗೊಳ್ಳಲಿದೆ

ರಾಜ್ಯದಲ್ಲಿ 1 ರಿಂದ 8ನೇ ತರಗತಿವರೆಗಿನ ಮಕ್ಕಳಿಗೂ ಭೌತಿಕ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೋವಿಡ್ ತಾಂತ್ರಿಕ ತಜ್ಞರ ಸಲಹಾ ಸಮಿತಿ ಒಪ್ಪಿಗೆ ನೀಡಿದ ಮರುದಿನವೇ ಶಾಲೆಗಳನ್ನು ಆರಂಭಿಸುವ ಬಗ್ಗೆ ಇಲಾಖೆ ತೀರ್ಮಾನಿಸಿದೆ. ಶಿಕ್ಷಣ ಇಲಾಖೆಯ ಮುಂದೆ

ಎರಡು ಆಯ್ಕೆಗಳಿವೆ. ಮೊದಲು 6 ರಿಂದ 8ನೇ ತರಗತಿ ಆರಂಭಿಸಿ ಮಕ್ಕಳ ಮತ್ತು ಪೋಷಕರ ಪ್ರತಿಕ್ರಿಯೆ ಆಧರಿಸಿ 15 ದಿನಗಳ ಬಳಿಕ 1ರಿಂದ5ನೇ ತರಗತಿ ಆರಂಭಿಸಲು ಚಿಂತನೆ ನಡೆಸಿದೆ. ಒಮ್ಮೆಗೆ 1ರಿಂದ 8ನೇ ತರಗತಿ ಆರಂಭಿಸುವ ಬಗ್ಗೆಯೂ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

Leave a Comment