ಕೋಸ್ಟಲ್ ಬುಲೆಟಿನ್ ವರದಿಯ ಫಲಶ್ರುತಿ: ಫರಂಗಿಪೇಟೆ :ದೇವಸ್ಥಾನದ ಪಕ್ಕ ತ್ಯಾಜ್ಯ ರಾಶಿಗೆ ಮಣ್ಣು ಹಾಕಿ ಸ್ವಚ್ಛತೆ, ಸಿ ಸಿ ಕಣ್ಗಾವಲು.

Coastal Bulletin
ಕೋಸ್ಟಲ್ ಬುಲೆಟಿನ್ ವರದಿಯ ಫಲಶ್ರುತಿ: ಫರಂಗಿಪೇಟೆ :ದೇವಸ್ಥಾನದ ಪಕ್ಕ ತ್ಯಾಜ್ಯ ರಾಶಿಗೆ ಮಣ್ಣು ಹಾಕಿ ಸ್ವಚ್ಛತೆ, ಸಿ ಸಿ ಕಣ್ಗಾವಲು.

ಬಂಟ್ವಾಳ :ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆ-ಕುಂಪಣಮಜಲು ರಸ್ತೆಯ ಶ್ರೀ ಆಂಜನೇಯ ದೇವಸ್ಥಾನದ ಸಮೀಪದ ರಸ್ತೆಯ ತೋಡಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಬಿಸಾಡಿದ ರಾಶಿ ರಾಶಿ ಕಸ,ಕೊಳೆತ ತ್ಯಾಜ್ಯಗಳಿಗೆ ಮಣ್ಣು ಹಾಕಿ ಸಮತಟ್ಟು ಮಾಡಿ ಶುಚಿಗೊಳಿಸಲಾಗಿದೆ ಹಾಗೂ ಪಕ್ಕದಲ್ಲೇ ಸಿ ಸಿ ಕ್ಯಾಮೆರಾ ಅಳವಡಿಸಿ ನಿಗಾ ಇರಿಸಲಾಗಿದೆ.


ಈ ಬಗ್ಗೆ ಕೋಸ್ಟಲ್ ಬುಲೆಟಿನ್ ವರದಿ ತೋಡಿನಲ್ಲಿ  ಹರಿಯುವ ನೀರಿಗೆ ತ್ಯಾಜ್ಯ ಬಿದ್ದು ನೀರು ಮಲಿನವಾಗಿ ದುರ್ನತ ಬೀರಿ, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಲಿದೆ ಎಂದು ವರದಿ ಮಾಡಿ ಸ್ಥಳೀಯಾಡಳಿತದ ಗಮನ ಸೆಳೆದಿತ್ತು ಹಾಗೂ ಪುದು ಗ್ರಾ ಪಂ ತಕ್ಷಣ ಕ್ರಮ ಕೈಗೊಂಡಿದೆ.


ಪಂಚಾಯತಿಯಿಂದ ಕಟ್ಟು ನಿಟ್ಟಿನ ಕ್ರಮ :

ಈ ಬಗ್ಗೆ ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ  ಕೊಸ್ಟಲ್ ಬುಲೆಟಿನ್ ಮಾಧ್ಯಮದೊಂದಿಗೆ ಮಾತನಾಡಿ ಪುದು ಗ್ರಾ ಪಂ ವ್ಯಾಪ್ತಿಯಲ್ಲಿ

ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ,ರಾಷ್ಟ್ರೀಯ ಹೆದ್ದಾರಿ ಹಾಗೂ ಇತರ ಕಡೆ ಕಸ ತ್ಯಾಜ್ಯ ಬಿಸಾಡುವವರ ಬಗ್ಗೆ ಮಾಹಿತಿ ನೀಡುವವರಿಗೆ ಒಂದು ಸಾವಿರ ರೂ ಬಹುಮಾನ ಘೋಷಿಸಲಾಗಿದೆ, ಕಡೆಗೋಳಿಯಿಂದ ಫರಂಗಿಪೇಟೆ ತನಕ ಹೆದ್ದಾರಿ ಬದಿ ಸ್ವಚ್ಛಗೊಳಿಸಲಾಗಿದೆ ಹಾಗೂ  ರಾತ್ರಿ ಹೊತ್ತು ತಮ್ಮ ತಂಡ ರೌಂಡ್ಸ್ ಮಾಡಿ ತ್ಯಾಜ್ಯ ಎಸೆಯುವವರ ಬಗ್ಗೆ ನಿಗಾ ಇಡಲಾಗುತಿದೆ, ಆಮೇಮಾರ್ ನಲ್ಲಿ ರಾಶಿ ಇದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.


Leave a Comment