ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ ಸಹಿತ 18 ಮಂದಿಗೆ ಕೆಯುಡಬ್ಲುಜೆ ದತ್ತಿನಿಧಿ ಪ್ರಶಸ್ತಿ ಘೋಷಣೆ.

Coastal Bulletin
ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ ಸಹಿತ 18 ಮಂದಿಗೆ ಕೆಯುಡಬ್ಲುಜೆ ದತ್ತಿನಿಧಿ ಪ್ರಶಸ್ತಿ ಘೋಷಣೆ.

ಬಂಟ್ವಾಳ :ಹಿರಿಯ ಪತ್ರಕರ್ತರಾದ ಹರೀಶ್ ಮಾಂಬಾಡಿ, ಸತೀಶ್ ಇರಾ, ಬಿ.ಎಂ.ಹನೀಫ್ ಸೇರಿ 18 ಮಂದಿಗೆ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಸಹಯೋಗದೊಂದಿಗೆ ನೀಡುವ ದತ್ತಿನಿಧಿ ಪ್ರಶಸ್ತಿಯನ್ನು ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಮತ್ತು ಕೆಯುಡಬ್ಲ್ಯುಜೆ ಕಾಸರಗೋಡು ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಘೋಷಿಸಿದ್ದಾರೆ.

ಮೇ 16ರಂದು ಕಾಸರಗೋಡು ಜಿಲ್ಲೆಯ ಕುಡಾಲುಮೇರ್ಕಳ ಸುಬ್ಬಯ್ಯಕಟ್ಟೆಯ ಎ.ಯು.ಪಿ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಕರ್ನಾಟಕದ ಸಚಿವ ಬೋಸರಾಜು ಮತ್ತು ಮಂಜೇಶ್ವರ ಶಾಸಕ ಅಶ್ರಫ್ ಉಪಸ್ಥಿತಿಯಲ್ಲಿ ಪ್ರದಾನ ಮಾಡುವರು.

ಹಿರಿಯ ಪತ್ರಕರ್ತರಾದ ಬಿ.ಎಂ.ಹನೀಫ್, ಕುರಿಯ ವಾಸುದೇವ ಎಂ.ಹೊಳ್ಳ, ಡಾ.ಯು.ಎಂ.ರವಿ, ವಿಜಯಲಕ್ಷ್ಮೀ ಶಿಬರೂರು, ಎಚ್.ಇ.ರವಿ ಸೋಮವಾರಪೇಟೆ,

ವಿಶ್ವನಾಥ ಬೆಳಗಲ್ ಮಠ ಕೊಪ್ಪಳ, ಪ್ರಕಾಶ್ ಸುವರ್ಣ ಕಟಪಾಡಿ, ದೇವೇಂದ್ರಪ್ಪ ಆವಂಟಿ ಗುಲ್ಬರ್ಗ, ಸತೀಶ್ ಇರಾ, ಸುಭಾಷ್ ಸಿರಿಯ, ಹರೀಶ್ ಮಾಂಬಾಡಿ, ನವೀನ್ ಡಿಸೋಜ ಕೊಡಗು, ಸಂಶುದ್ದೀನ್ ಎಣ್ಮೂರು, ಎ.ಆರ್.ಚಿದಂಬರ ಕೊರಟಗೆರೆ, ತುಮಕೂರು, ಕೆ.ಆರ್.ಮಂಜುನಾಥ ಹಾಸನ, ತೆಕ್ಕೆಕೆರೆ ಶಂಕರನಾರಾಯಣ ಭಟ್ಟ, ಸುಬ್ಬಣ್ಣ ಶೆಟ್ಟಿ ಕುಚಿಕ್ಕಾಡ್ ಅವರಿಗೆ ವಿವಿಧ ದತ್ತಿ ಪ್ರಶಸ್ತಿ ನೀಡಗೌರವಿಸಲಾಗುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Comment