Coastal Bulletin

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ವತಿಯಿಂದ ಮಂಗಳವಾರ ಏರ್ಪಡಿಸಿದ್ದ 22ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ದೇಶದಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯು ತನ್ನ ಗ್ರಾಹಕರು ಮತ್ತು ಪ್ರತಿನಿಧಿಗಳಿಗೆ ತ್ವರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಆನ್ ಲೈನ್ ಸೌಲಭ್ಯ ಒದಗಿಸಿದ ಪರಿಣಾಮ ಗರಿಷ್ಟ ಮಟ್ಟದ ಸಾಧನೆ ದಾಖಲಿಸಲು ಸಾಧ್ಯವಾಗಿದೆ ಎಂದು ಎಲ್ಲೈಸಿ ಉಡುಪಿ ವಿಭಾಗೀಯ ಹಿರಿಯ ಪ್ರಬಂಧಕಿ ಬಿಂದು ರಾಬಟ್ರ್ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ವತಿಯಿಂದ ಮಂಗಳವಾರ ಏರ್ಪಡಿಸಿದ್ದ 22ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಂಟ್ವಾಳ ಶಾಖೆ ಮುಖ್ಯ ಪ್ರಬಂಧಕ ಪಿ.ಸಿ.ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾರುಕಟ್ಟೆ ವಿಭಾಗೀಯ ಅಧಿಕಾರಿ ರಮೇಶ ಭಟ್ ಮತ್ತು ಮಾರಾಟ ವಿಭಾಗೀಯ ಅಧಿಕಾರಿ ಸದಾಶಿವ ಭಟ್ ಮಾತನಾಡಿ ದೇಶದ ಆರ್ಥಿತೆಯಲ್ಲಿ ಎಲ್ಲೈಸಿ

ಸಂಸ್ಥೆಯ ಪಾತ್ರ ಮಹತ್ತರವಾಗಿದೆ ಎಂದರು. ಬಂಟ್ವಾಳ ಉಪ ಶಾಖಾಧಿಕಾರಿ ಸುಂದರ ಮೇರ, ಹಿರಿಯ ಪ್ರತಿನಿಧಿ ಮಹಾಬಲ ಆಳ್ವ ಶುಭ ಹಾರೈಸಿದರು.

ಇದೇ ವೇಳೆ ಜೇಸಿ ರಾಷ್ಟ್ರೀಯ ತರಬೇತುದಾರ ಕೃಷ್ಣ ಮೋಹನ್ ಇವರಿಂದ ತರಬೇತಿ, ಸಾಧಕ ಪ್ರತಿನಿಧಿಗಳಿಗೆ ಸನ್ಮಾನ, ಗರಿಷ್ಟ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಅಭಿನಂದನೆ ನಡೆಯಿತು. ಹಿರಿಯ ಪ್ರತಿನಿಧಿ ಲೂವಿಸ್ ಮಸ್ಕರೇನಸ್ ಸನ್ಮಾನಿತರನ್ನು ಪರಿಚಯಿಸಿ, ರೋಹಿದಾಸ್ ಕುಂದರ್ ಅನಿಸಿಕೆ ವ್ಯಕ್ತಪಡಿಸಿದರು. ರಾಜಶ್ರೀ ಗುಣಪಾಲ ಪೆರಾಡ್ಕರ್ ಪ್ರಾರ್ಥಿಸಿದರು.

ಕಾರ್ಯಕ್ರಮ ಸಂಚಾಲಕ ಯಶೋಧರ ಗೌಡ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪ್ರತಿನಿಧಿ ರಾಜಾ ಬಂಟ್ವಾಳ್ ವಂದಿಸಿದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತು ಪ್ರತಿನಿಧಿ ನವೀನ್ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು. ಭವಾನಿ ನಾರಾಯಣ ಅಮೀನ್ ಮತ್ತು ವಿಶಾಲಾಕ್ಷಿ ಬ್ರಹ್ಮರಕೂಟ್ಲು ಸಹಕರಿಸಿದರು.  

Leave a Comment