ಬಂಟ್ವಾಳ :ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇದರ ಆಶ್ರಯದಲ್ಲಿ ಪ್ರತಿ 3ವರ್ಷಕೊಮ್ಮೆ ನಡೆಯುವ ಶನಿ ಪೂಜೆಯ ಅಂಗವಾಗಿ 7ನೇ ವರ್ಷದ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮದ ಸಮಾಲೋಚನಾ ಸಭೆಯು ಭಾನುವಾರ ನಡೆಯಿತು.
ಶ್ರೀ ಶನೈಶ್ಚರ ಸೇವಾ ಸಮಿತಿಗೆ ಈ ಕೆಳಗಿನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಚೇತನ್ ಮುಂಡಾಜೆ,ಉಪಾಧ್ಯಕ್ಷರಾಗಿ ಮಹಾಬಲ ಭಂಡಾರಿ ಗೋವಿಂತೋಟ,ಮಾಧವ ಅರ್ಬಿ, ಯಶವಂತ ಪಕೋಳಿಮಾರ್, ವಿದ್ಯಾ ಚಂದ್ರಶೇಖರ್, ಶಶಿಕಲ ಟೀಚರ್,ಕಾರ್ಯದರ್ಶಿ ವಿಶ್ವನಾಥ್ ಕುಲಾಲ್ ನೆತ್ತರಕೆರೆ, ಕೋಶಾಧಿಕಾರಿ ಶ್ರೀಧರ್ ನೆತ್ತರಕೆರೆ, ಜೊತೆ ಕಾರ್ಯದರ್ಶಿ ಚಂದ್ರಹಾಸ ಹೊಳ್ಳರ ಬೈಲು, ದಾಮೋದರ ಬೆಂಜನಪದವು, ಸವಿತಾ ಪ್ರಭಾಕರ,
ಹರಿಣಾಕ್ಷಿಸದಾನಂದ, ಸಲಹೆಗಾರರಾಗಿ ವಿಠ್ಠಲ್ ಸಾಲಿಯಾನ, ರಾಮದಾಸ್ ಕೋಟ್ಯಾನ್ ಮಜಿಲಗುತ್ತು, ಪುರುಷೋತ್ತಮ ಹೊಳ್ಳರ ಬೈಲು, ಚಂದ್ರಹಾಸ ನೆತ್ತರಕೆರೆ, ಪದ್ಮನಾಭ ಶೆಟ್ಟಿ ಪುಂಚಮೆ, ಶ್ರೀಮತಿ ಲಲಿತಾ ಸುಂದರ್.
ತಾ.4.12.2021 ನೇ ಶನಿವಾರ ಶನೈಶ್ಚರ ಪೂಜೆ ನಡೆಯಲಿದೆ, ರಾತ್ರಿ ಕಟೀಲು ಮೇಳದ ಯಕ್ಷಗಾನ ಬಯಲಾಟ ಹಾಗೂ ಪೂರ್ವಭಾವಿಯಾಗಿ 7 ದಿನಗಳ ಸಾಮೂಹಿಕ ಎಳ್ಳುಗಂಟು ದೀಪೋತ್ಸವ ನಡೆಯಲಿದೆ.














