ಸೇವೆಯೇ ಪರಮ ಧರ್ಮ ಎನ್ನುವ ದ್ಯೇಯದೊಂದಿಗೆ, ಅಶಕ್ತ ಕುಟುಂಬಗಳ ಪಾಲಿಗೆ ಬೆಳಕಾಗಿ ಅವರ ಕಷ್ಟಕ್ಕೆ ನೆರಳಾಗಿ ಸಮಾಜದಲ್ಲಿ ಮಾನವೀಯತೆಯ ಸಾರವನ್ನು ಸೇವೆಯ ಮೂಲಕ ಪಸರಿಸುತ್ತಿರುವ ಅಮೃತ ಸಂಜೀವಿನಿ (ರಿ )ಮಂಗಳೂರು ಎಂಬ ಸೇವಾ ಸಂಸ್ಥೆಯು ತನ್ನ 75ನೇ ಸೇವಾ ಯೋಜನೆಯ ಅಂಗವಾಗಿ 30 ಬಡ ಕುಟುಂಬಗಳಿಗೆ ಸಹಾಯಹಸ್ತ ನೀಡುವ ಸಂಜೀವಿನಿ ಮಹೋತ್ಸವ ಎಂಬ ಕಾರ್ಯಕ್ರಮವನ್ನು ವೀರಕೇಸರಿ ಕ್ರಿಕೆಟರ್ಸ್ ಕಣ್ಣೂರು ಹಾಗೂ ಸಂಜೀವಿನಿ ಎರಮಲೆ ಇದರ ಆಶ್ರಯದಲ್ಲಿ ಬಾನುವಾರ ಸಂಜೆ 5 30ಕ್ಕೆ ಲಕ್ಷ್ಮೀನಾರಾಯಣ ಸಭಾಭವನ ಪಡೀಲ್ ಕಣ್ಣೂರು ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಶ್ರೀಶ್ರೀಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ, ಇವರು ಆಶೀರ್ವಾಚನ ನೀಡಲಿದ್ದಾರೆ, ಅದೇರೀತಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಸಂತೋಷ್ ಕುಮಾರ್ ಶೆಟ್ಟಿ, ಪದ್ಮಶ್ರೀ ಮಹಾಲಿಂಗ ನಾಯ್ಕ್,ಸೀತಾರಾಮ ಎ, ಚಿರಾಗ್ ಆರ್ ಆಚಾರ್ಯ, ಭೋಜರಾಜ್ ವಾಮಂಜೂರ್,ವಸಂತ್ ಕುಮಾರ್
ಪಣಪಿಲ,ನವೀನ್ ಕುಲಾಲ್, ಅರುಣ್ ಕುಲಾಲ್ ಮುಂತಾದ ಗಣ್ಯರು ಭಾಗಿಯಾಗಳಿದ್ದಾರೆ.
ಈ ಸಂದರ್ಭದಲ್ಲಿ ಶಿಫಾಲಿ ಕೋಟ್ಯಾನ್ ಇವರಿಂದ ಭರತನಾಟ್ಯ ಹಾಗೂ ಶಿವರಜಿನಿ ಮಹಿಳಾ ಭಜನಾ ಮಂಡಳಿ ಸುರತ್ಕಲ್ ಇವರಿಂದ ಭಜನೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಸರ್ವರೂ ಪ್ರೀತಿಪೂರ್ವಕ ವಾಗಿ ಪಾಲ್ಗೊಳ್ಳಬೇಕೆಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.














