Coastal Bulletin

ಮಂಗಳೂರು: ಯಕ್ಷಗಾನ ಗುರು, ವಿದ್ವಾಂಸ, ಪ್ರಸಂಗಕರ್ತರಾದ ಛಾಂದಸ ಗಣೇಶ ಕೊಲೆಕಾಡಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯಕೀಯ ವೆಚ್ಚ ಹಾಗೂ ಜೀವನ ನಿರ್ವಹಣೆಗಾಗಿ ದಾನಿಗಳ ನೆರವು ಕೋರಿದ್ದಾರೆ.

ಮುಲ್ಕಿ ಕೊಲೆಕಾಡಿಯ ಮನೆಯಲ್ಲಿ ತನ್ನ ಇಳಿವಯಸ್ಸಿನ ತಾಯಿಯ ಜತೆ ವಾಸಿಸುತ್ತಿರುವ ಗಣೇಶ ಕೊಲೆಕಾಡಿ ಅವರಿಗೆ ಆದಾಯದ ಯಾವುದೇ ಮೂಲವಿಲ್ಲ. ಕಳೆದ ೧೮ ವರ್ಷಗಳಿಂದ ತನ್ನ ಮನೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ಭಾಗವತಿಕೆ, ಛಂದಸ್ಸಿನ ಶಿಕ್ಷಣ ನೀಡುತ್ತಿದ್ದಾರೆ. ೪೦ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಅವರ ಬದುಕು ಈಗ ಆರೋಗ್ಯ ದೃಷ್ಟಿಯಿಂದ ಹಾಗೂ ಆರ್ಥಿಕವಾಗಿ ದುರ್ಬಲವಾಗಿದೆ. ಅವರು ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯುತ್ತಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಈಗ ತರಗತಿಯನ್ನೂ ನಡೆಸಲಾಗುತ್ತಿಲ್ಲ. ಆದರೂ, ತನ್ನ ಅನಾರೋಗ್ಯದ ನಡುವೆಯೂ

ಮನೆಗೆ ಬಂದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಅವರ ವೈದ್ಯಕೀಯ ಹಾಗೂ ಜೀವನ ನಿರ್ವಹಣೆಯ ವೆಚ್ಚವೇ ತಿಂಗಳಿಗೆ ೩೦ ಸಾವಿರ ರೂ. ಆಗುತ್ತದೆ. ಕಲಾಭಿಮಾನಿಗಳು ಅವರಿಗೆ ಆರ್ಥಿಕ ನೆರವು ನೀಡಿ ಒಬ್ಬ ಗುರು, ಪ್ರಸಂಗಕರ್ತ, ವಿದ್ವಾಂಸರನ್ನು ಉಳಿಸಿಕೊಳ್ಳಬೇಕಿದೆ ಎಂದು ಅವರ ಶಿಷ್ಯರು ವಿನಂತಿಸಿದ್ದಾರೆ.

Google pay number: 94821 30381

Bank account details:

Mr. Ganesh,

A/c no.20303905203,

IFSC : SBIN0007904 

State bank of India Karnad-Mulky- 7904,

Mr. Ganesh,

S/o. Sri Krishnappa, 

Address: 3-150, kallagudde house, KolaKady, Athikaribettu Mulky.

Leave a Comment