ಯಕ್ಷಕಲಾ ಪೋಷಕ, ಸುವರ್ಣ ಪ್ರತಿಷ್ಠಾನ ಕರ್ನಿರೆ ಇದರ ಅಧ್ಯಕ್ಷರಾದ ಪ್ರಭಾಕರ್ ಸುವರ್ಣ ದುಬೈ ಇವರ 70ನೇ ಹುಟ್ಟುಹಬ್ಬವನ್ನು ಅಮ್ಮುಂಜೆಯ ಕೌಸ್ತುಭ ನಿಲಯದಲ್ಲಿ ಆಚರಿಸಲಾಯಿತು.
ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು ರಚನೆಯ ಸುವರ್ಣರ ಬಗೆಗಿನ ಭಾಮಿನಿ ಪದ್ಯವನ್ನು ತೆಂಕುತಿಟ್ಟಿನ ಖ್ಯಾತ ಯಕ್ಷಗಾನ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಅವರು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಸಂಘಟಕ ಜನಾರ್ಧನ್ ಅಂಮ್ಮುಜೆಯವರು ಅಥಿತಿಗಳನ್ನು ಸ್ವಾಗತಿಸಿ,ಪ್ರಭಾಕರ್ ಸುವರ್ಣ ಯಕ್ಷಗಾನ ಹಾಗೂ ಯಕ್ಷ ಕಲಾವಿದರ
ಬಗ್ಗೆ ಅವರಿಗಿರುವ ವಿಶೇಷ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದು ಬಡ ಕುಟುಂಬಗಳಿಗೆ ಸಹಾಯ,ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದ್ದಾರೆ ಎಂದರು.
ಯಕ್ಷಗಾನ ಕಲಾವಿದರಾದ ಪದ್ಮನಾಭ ಕಟೀಲು,ರಮೇಶ್ ಕುಲಶೇಖರ,ಚಂದ್ರಶೇಖರ ಧರ್ಮಸ್ಥಳ,ಪ್ರವೀಣ್ ವರಕೊಡಿ,ಅರುಣ್ ಕೋಟ್ಯಾನ್,ಸಂಜಯ ಉಪಸ್ಥಿತರಿದ್ದರು.ಯಕ್ಷಗಾನ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಧನ್ಯವಾದ ಸಮರ್ಪಿಸಿದರು.















