Coastal Bulletin

ಬೆಂಗಳೂರು:ಬೈಕ್, ಟಿ.ವಿ, ಫ್ರಿಡ್ಜ್ ಹೊಂದಿದ್ದರೆ ಬಿಪಿಎಲ್ ಕಾರ್ಡ್ ರದ್ದು ಆದೇಶವನ್ನು ಸರ್ಕಾರ ಹೊರಡಿಸಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟಪಡಿಸಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಇಲಾಖೆ  ಬೈಕ್, ಟಿವಿ, ಫ್ರಿಡ್ಜ್ ಹೊಂದಿರೋ ಕುಟುಂಬದವರು ಆದ್ಯತಾ ಪಡಿತರ ಪಡೆಯಲು ಅರ್ಹರು.ಇದು ಸರ್ಕಾರ ನಿಗದಿಪಡಿಸಿರೋ ಮಾನದಂಡದಲ್ಲೇ ಅವಕಾಶ

ಇದೆ ಎಂದು ತಿಳಿಸಿದೆ. ಯಾವುದೇ ಅಧಿಕಾರಿ ಆಧಾರ ರಹಿತವಾಗಿ ಕಾರ್ಡ್ ರದ್ದುಪಡಿಸಿದ್ರೆ ತಹಶಿಲ್ದಾರ್ ಅಥವಾ ಡಿಸಿಗಳಿಗೆ ದೂರು ನೀಡಬಹುದು ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.

Leave a Comment