Coastal Bulletin

ಆನ್​ಲೈನ್ ಜೂಜು ನಿಷೇಧಿಸುವ ನಿಟ್ಟಿನಲ್ಲಿ ಕರ್ನಾಟಕ‌ ಪೊಲೀಸ್ ಕಾಯ್ದೆಗೆ ತಿದ್ದುಪಡಿ ವಿಧೇಯಕ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ

ಈ ಕುರಿತು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ. "ಕಂಪ್ಯೂಟರ್, ಮೊಬೈಲ್, ಎಲೆಕ್ಟ್ರಾನಿಕ್ ಸಾಧನ ಬಳಸಿ ಆನ್‌ಲೈನ್ ಮೂಲಕ ಹಣದ ವ್ಯವಹಾರ ನಡೆಸುವ ಜೂಜಾಟವನ್ನು ನಿಷೇಧಿಸಲು ಈ ವಿಧೇಯಕವನ್ನ ತರಲಾಗುತ್ತಿದೆ.‌ ಈ‌ ಸಂಬಂಧ ಹೈಕೋರ್ಟ್​ನಲ್ಲಿ ರಿಟ್ ಪಿಟಿಷನ್ ಇತ್ತು. ಅದರನ್ವಯ ಇದೀಗ ಮುಂದಿನ ಅಧಿವೇಶನದಲ್ಲಿ ಈ

ವಿಧೇಯಕವನ್ನು ಮಂಡಿಸಲಾಗುವುದು" ಎಂದರು.

"ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಆನ್​ಲೈನ್ ಗ್ಯಾಂಬ್ಲಿಂಗ್ ಮಟ್ಟ ಹಾಕಲಾಗುತ್ತದೆ. ಹಣದ ವ್ಯವಹಾರ ನಡೆಸುವ, ಎಲೆಕ್ಟ್ರಾನಿಕ್ ಹಣದ ವಹಿವಾಟು ನಡೆಸುವ ಆನ್​ಲೈನ್ ಗೇಮಿಂಗ್ ನಿಷೇಧಿಸುವ ಸಂಬಂಧವೂ ಈ ತಿದ್ದುಪಡಿ ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾಗಿದೆ  ಎಂದು ಸಚಿವರು ತಿಳಿಸಿದ್ದಾರೆ.




Leave a Comment