ಟೀಮ್ ಇಂಡಿಯಾದ ಕ್ರಿಕೆಟರ್ ಶಿಖರ್ ಧವನ್ ಹಾಗೂ ಅವರ ಪತ್ನಿ ಆಯಿಷಾ ಮದುವೆಯಾಗಿ 8 ವರ್ಷಗಳ ನಂತರ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ವಿಚಾರವನ್ನೂ ಧವನ್ ಖಚಿತಪಡಿಸಿಲ್ಲ. ಆದ್ರೆ ಈ ಬಗ್ಗೆ ಆಯಿಷಾ ಇನ್ಸ್ಟಾಗ್ರಾಮ್ ನಲ್ಲಿ ಸುಧೀರ್ಘ ಪೋಸ್ಟ್ ಹಾಕುವ ಮೂಲಕ ಬಹಿರಂಗ ಪಡಿಸಿದ್ದಾರೆ.
ಶಿಖರ್ ಧವನ್ ಆಯಿಷಾ ಜೊತೆಗೆ 2012 ರಲ್ಲಿ ದಾಂಪತ್ಯ
ಜೀವನಕ್ಕೆ ಕಾಲಿಟ್ಟಿದ್ದರು.ಆಯಿಷಾಗೆ ಶಿಖರ್ ಧವನ್ 2ನೇ ಪತಿಯಾಗಿದ್ದಾರೆ. ಮೊದಲ ಪತಿ ಜೊತೆಗೆ ವಿಚ್ಛೇದನ ಪಡೆದುಕೊಂಡಿದ್ದ ಆಯಿಷಾಗೆ ಆ ವೇಳೆ ಇಬ್ಬರು ಹೆಣ್ಣು ಮಕ್ಕಳಿದ್ದರು.ಇದೀಗ ಧವನ್ ಜೊತೆಗೂ ವಿಚ್ಛೇಧನ ಪಡೆದಿದ್ದಾರೆ.















