ಮಂಗಳೂರು;ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಮತ್ತು ನಿಫಾ ವೈರಸ್ ಹಿನ್ನೆಲೆಯಲ್ಲಿ ಎರಡು ತಿಂಗಳು ಕೇರಳಕ್ಕೆ ಪ್ರವೇಶ ಮತ್ತು ಕೇರಳದಿಂದ ಕರ್ನಾಟಕಕ್ಕೆ ಆಗಮನಕ್ಕೆ ನಿರ್ಬಂಧ ವಿಧಿಸಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಆದೇಶ ನೀಡಿದ್ದಾರೆ.
ಕೇರಳದಿಂದ ಬರುವ ಪ್ಯಾರಾ ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳೂ ಸೇರಿದಂತೆ ಅಕ್ಟೋಬರ್ ಅಂತ್ಯವರೆಗೆ ಯಾರೂ ಮಂಗಳೂರಿಗೆ ಬರುವಂತಿಲ್ಲ,ಕೇರಳದಲ್ಲಿದ್ದವರಿಗೆ ಈ ಬಗ್ಗೆ ಆಯಾ ಶಿಕ್ಷಣ ಸಂಸ್ಥೆ ಸೂಚನೆ ನೀಡುವಂತೆ ಆದೇಶ ನೀಡಲಾಗಿದೆ
ಕೇರಳಕ್ಕೆ ತೆರಳುವ ಉದ್ದೇಶ ಇದ್ದವರು ಅಕ್ಟೋಬರ್ ಅಂತ್ಯದವರೆಗೆ ಮುಂದೂಡುವಂತೆ ಸೂಚನೆ
ನೀಡಲಾಗಿದ್ದು, ಆಸ್ಪತ್ರೆ, ನರ್ಸಿಂಗ್ ಹೋಮ್, ಕಚೇರಿ, ಹೊಟೇಲ್, ಕೈಗಾರಿಕೆ ಸಿಬ್ಬಂದಿಗಳಿಗೂ ದ.ಕ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಉದ್ಯೋಗದಾತರು ಕೇರಳ ಮೂಲದ ಸಿಬ್ಬಂದಿಗಳನ್ನು ಪ್ರವೇಶ ಮಾಡದಂತೆ ಸೂಚನೆ ನೀಡಲಾಗಿದೆ, ಸಾರ್ವಜನಿಕರು ತುರ್ತು ಕಾರಣವಿಲ್ಲದೇ ಪ್ರಯಾಣಿಸಬಾರದು ಎಂದು ಅದೇಶದಲ್ಲಿ ತಿಳಿಸಲಾಗಿದೆ.















