ಬಂಟ್ವಾಳ ತಾಲ್ಲೂಕಿನ ಮಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ 69ಲಕ್ಷ ವೆಚ್ಚದ ಜಲ್ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶುಕ್ರವಾರ ಚಾಲನೆ ನೀಡಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಜಲ್ ಜೀವನ್ ಮಿಷನ್ ಯೋಜನೆಯಡಿ ರೂ 69ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶುಕ್ರವಾರ ಚಾಲನೆ ನೀಡಿದರು.
ಇಲ್ಲಿನ ಸೂರಿಕುಮೇರು ಹಳಿರ, ಪಳ್ಳತ್ತಿಲ್ಲ ಮತ್ತು ಭರಣಿಕೆರೆ ಎಂಬಲ್ಲಿ ತಲಾ 50ಸಾವಿರ ಲೀಟರ್ ಸಾಮಥ್ರ್ಯದ ಟ್ಯಾಂಕ್ ನಿರ್ಮಾಣ, ಮಾಣಿ ಕಾಪಿಕಾಡು ಎಂಬಲ್ಲಿ ರೂ 1 ಲಕ್ಷ ಲೀಟರ್ ಸಾಮಥ್ರ್ಯದ ಟ್ಯಾಂಕ್ ನಿರ್ಮಾಣ,ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದ
ಒಟ್ಟು 30 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ 33.72 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿದೆ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಾ ಮಾದವ ಮಾವೆ, ಪ್ರಮುಖರಾದ ನಾರಾಯಣ ಶೆಟ್ಟಿ, ಗಣೇಶ್ ರೈ ಮಾಣಿ , ಪುಷ್ಪರಾಜ್ ಚೌಟ, ಹರೀಶ್ ಕುಲಾಲ್, ಮಿತ್ರಾಕ್ಷಿ, ಪ್ರಮಿತ್ ಶೆಟ್ಟಿ, ಜನಾರ್ಧನ ಪೂಜಾರಿ, ನಾರಾಯಣ ಭಟ್, ರಾಜೇಶ್ ಕುಲಾಲ್, ಉಮೇಶ್, ಪ್ರಜ್ವಲ್, ಯತೀಶ್ ಶೆಟ್ಟಿ, ನವೀನ್, ನೋಣಯ್ಯ ನಾಯ್ಕ, ದಿವಾಕರ ಕುಲಾಲ್ ಮತ್ತಿತರರು ಇದ್ದರು.














