Coastal Bulletin

ಕಡಬ: ಮನೆಯ ಹಿಂಬಾಗದ ಶೆಡ್ಡ್ ನಲ್ಲಿ ಅಕ್ರಮ‌ ಕಸಾಯಿಖಾನೆ ನಡೆಸುತ್ತಿದ್ದ ಆರೋಪದಲ್ಲಿ ಓರ್ವನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.ಕಡಬ ಸಮೀಪದ ಕಳಾರ ನಿವಾಸಿ ಅಬ್ದುಲ್ ರಹಿಮಾನ್ ಬಂಧಿತ.

ಪಾಳು ಬಿದ್ದ ಶೆಡ್ ನಲ್ಲಿ ಅಕ್ರಮವಾಗಿ ಗೋ ಮಾಂಸ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯಿಂದ ಕಾರ್ಯಾಚರಣೆ ನಡಸಿದ ಪೊಲೀಸರು 40 ಕೆಜಿ ದನದ ಮಾಂಸ, ಕಟ್ಟಿ ಹಾಕಿದ್ದ

4 ಕರುಗಳು,ಕಬ್ಬಿಣದ ಕತ್ತಿಗಳು, ನಾಲ್ಕು ಚೂರಿ, ಇಲೆಕ್ಟ್ರಾನಿಕ್‌ ತೂಕಮಾಪನ‌ ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಮಹಮ್ಮದ್ ಮುಸ್ತಫಾ ಮತ್ತು ಮಹಮ್ಮದ್ ಶರೀಪ್ ಎಂಬ ಇಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment