Coastal Bulletin

ಮೂಡುಬಿದಿರೆ: ದಂಪತಿ ನಡುವಿನ ಕಲಹ ಪತ್ನಿಯ ಸಾವಿನಲ್ಲಿ ಅಂತ್ಯ ಕಂಡ ಘಟನೆ ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ

ಮೂಡುಬಿದಿರೆಯ ಮಠ ನಿವಾಸಿ ಸುನೀತಾ(30) ಕೊಲೆಯಾದವರು. ಪತಿ  ದಿನ್ ರಾಜ್ ಕೊಲೆ ಆರೋಪಿ. 

ಆಗಸ್ಟ್ 17 ಸಂಜೆ ವೇಳೆ ದಂಪತಿ ಮಧ್ಯೆ ವೈಮನಸ್ಸಿನಿಂದ ಜಗಳ ನಡೆದಿದೆ. ಈ ಸಂದರ್ಭ ಕೋಪಗೊಂಡ ದಿನ್ ರಾಜ್ ಪತ್ನಿ ಸುನಿತಾ ತಲೆಗೆ ಮಾರಣಾಂತಿಕವಾಗಿ

ಹೊಡೆದಿದ್ದಾನೆನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಸುನೀತಾ ತಲೆಯಿಂದ ತೀವ್ರ ರಕ್ತಸ್ರಾವವಾಗಿ,‌ ಕುಸಿದು ಬಿದ್ದಿದ್ದಾರೆ.  ತಕ್ಷಣ ಕುಟುಂಬಸ್ಥರು, ಸ್ಥಳೀಯರು  ಸುನೀತಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. 

Leave a Comment