Coastal Bulletin

ಕಾಶ್ಮೀರದ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ತನಗಿದೆ ಎಂದು ತಾಲಿಬಾನ್ ಗುಂಪು ಹೇಳಿದೆ.ಆದರೆ, ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುವ ಉದ್ದೇಶ ಹೊಂದಿಲ್ಲ ಎಂದಿದೆ.

ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಬಿಬಿಸಿ ಉರ್ದು ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ  “ಮುಸ್ಲಿಮರಾಗಿರುವ ನಮಗೆ ಕಾಶ್ಮೀರ, ಭಾರತ ಮತ್ತು ಯಾವುದೇ ಇತರ ದೇಶಗಳಲ್ಲಿ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು

ಇದೆ.ಮುಸ್ಲಿಮರು ನಿಮ್ಮ ಸ್ವಂತ ಜನರು, ನಿಮ್ಮ ಸ್ವಂತ ಪ್ರಜೆಗಳು ಎಂದು ಹೇಳುತ್ತೇವೆ. ನಿಮ್ಮ ಕಾನೂನುಗಳ ಅಡಿಯ ಅವರಿಗೆ ಸಮಾನ ಹಕ್ಕುಗಳಿವೆ. ಎಂದು ಮುಸ್ಲಿಮರಿಗಾಗಿ ಧ್ವನಿ ಎತ್ತುತ್ತೇವೆ” ಎಂದು ಹೇಳಿದ್ದಾರೆ.

Leave a Comment