ಹಿಂದೂ ಜಾಗರಣಾ ವೇದಿಕೆ ತುಂಬೆ ವಲಯ ಇದರ ಆಶ್ರಯದಲ್ಲಿ ಶ್ರೀ ಶಾರದಾ ಸಭಾ ಭವನದಲ್ಲಿ"ಅಖಂಡ ಭಾರತ" ಸಂಕಲ್ಪ ದಿನ ನಡೆಯಿತು.
ಭಾರತ ಮಾತೆಗೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಖಂಡ ಭಾರತ ಸಂಕಲ್ಪ ದಿನದ ಪ್ರಮುಖ ಭಾಷಣಕಾರರಾಗಿ ಮಾತನಾಡಿದ ಹಿಂ.ಜಾ.ವೇ.ಯ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಭಾರತ ದೇಶದ ಅಖಂಡತೆಯ ಅವಶ್ಯಕತೆ, ದೇಶದ ಅಖಂಡತೆಗಾಗಿ ಹಿರಿಯರು ನಡೆಸಿದ ಹೋರಾಟ, ದೇಶ ವಿರೋಧಿ ಚಟುವಟಿಕೆ ವಿರುದ್ದ ನಮ್ಮ ಹೋರಾಟದ ಬಗ್ಗೆ ತಿಳಿಸಿದರು. ಉಳ್ಳಾಲದಲ್ಲಿ ಐ.ಸಿ.ಎಸ್ ಉಗ್ರ ಚಹರೆಗಳ ವಿರುದ್ಧ ಕಾಂಗ್ರೆಸ್ ಸೇರಿದಂತೆ ಬುದ್ಧಿಜೀವಿಗಳ ಮೌನದ ವಿರುದ್ಧ ಅವರನ್ನು ಪ್ರಶ್ನಿಸುವಂತೆ ಸ್ವಯಂ ಸೇವಕರಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ
ಅತಿಥಿಗಳಾಗಿ ಡೀಕೆಶ್ ಪೂಜಾರಿ, ಮುಂಡಾಜೆ (ನಿವೃತ್ತ ಯೋಧರು) ಭಾಗವಹಿಸಿದ್ದರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಿಲ್ ಪಂಡಿತ್, ಖ್ಯಾತ ಜ್ಯೋತಿಷ್ಯರು ವಹಿಸಿದ್ದರು ಮತ್ತು ಹಿಂದೂ ಜಾಗರಣಾ ವೇದಿಕೆ ತುಂಬೆ ವಲಯದ ಅಧ್ಯಕ್ಷರಾದ ವಿಜಯ್ ಕಜೆಕಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳು ಶ್ರೀಯುತ ತಾರಾನಾಥ ಕೊಟ್ಟಾರಿ, ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ, ಪುರುಷೋತ್ತಮ ಗಟ್ಟಿ, ಮನೋಹರ್ ಕುಂಜತ್ತೂರು, ಪಂಚಾಯತ್ ಸದಸ್ಯರಾದ ಕಿಶೋರ್ ರಾಮಲ್ ಕಟ್ಟೆ, ಅರುಣ್ ಕುಮಾರ್ ಗಾಣದಲಚ್ಚಿಲು ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.
















