Coastal Bulletin

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆ ಸ್ನೇಹಿತ ಮೊದಲ ಬಾರಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

' ಆಗಸ್ಟ್  24 ರ ಸಂಜೆ 7:25ರ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತೆ ಜೆಎಸ್‌ಎಸ್ ಆಯುರ್ವೇದಿಕ್ ಕಾಲೇಜಿನ ಎದುರಿಗಿನ ರಸ್ತೆಗೆ ಹೋಗಿದ್ದೆವು.ನಾನು ಪ್ರತಿದಿನ ಇಲ್ಲಿ ಜಾಗಿಂಗ್ ಮಾಡಲು ಬರುತ್ತಿದ್ದೆ. ಹಾಗಾಗಿ ಈ ಜಾಗ ನನಗೆ ಪರಿಚಿತ.ನಾವು ಒಂದು ನಿಮಿಷಕ್ಕೆ ದ್ವಿಚಕ್ರ ವಾಹನ ನಿಲ್ಲಿಸಿದೆವು. ಅದೇ ಸಮಯಕ್ಕೆ ಕೈಯಲ್ಲಿ ದೊಣ್ಣೆ ಹಿಡಿದ ಆರು ಮಂದಿ ನಮ್ಮ ಬಳಿ ಬಂದರು.ದೊಣ್ಣೆಯಿಂದ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ನನ್ನನ್ನು ತಳ್ಳಿ ಸ್ನೇಹಿತೆಯನ್ನು ಎಳೆದುಕೊಂಡು ಹೋದರು. ಆ ಜಾಗದಲ್ಲಿ ಹೆಚ್ಚು ಪೊದೆ ಇತ್ತು. ನಾನು ಇದನ್ನೆಲ್ಲಾ ಕಣ್ಣಾರೆ ಕಂಡಿದ್ದೇನೆ. ಆ ಗುಂಪಿನಲ್ಲಿ ತೆಳ್ಳನೆಯ

ವ್ಯಕ್ತಿಯೊಬ್ಬ ಇದ್ದ. ಆತ ನನ್ನ ಹಣೆಗೆ ಕಲ್ಲಿನಿಂದ ಹೊಡೆದ. ಅದೇ ಕೊನೆ ಮತ್ತೇನಾಯಿತು ತಿಳಿಯಲಿಲ್ಲ.ತದನಂತರ ನಾನು ಎದ್ದೆ ಆಗ ಎಲ್ಲರೂ ಅಲ್ಲೇ ಇದ್ದರು. ನಾಲ್ಕು ಮಂದಿ ನನಗೆ ಮತ್ತೆ ಹೊಡೆದು ನಿನ್ನ ಅಪ್ಪನಿಗೆ ಕರೆ ಮಾಡು, ಮೂರು ಲಕ್ಷ ಹಣ ತರಿಸಿಕೊ ಎಂದರು. ನಾನು ನನ್ನ ಸ್ನೇಹಿತೆ ಎಲ್ಲಿ ಎಂದು ಕೇಳಿದೆ. ಆಕೆಯನ್ನು ನನ್ನ ಬಳಿ ಎಳೆದುಕೊಂಡು ಬಂದು ನನ್ನ ಬಳಿ ಕೂರಿಸಿದರು. ಅವಳ ಸ್ಥಿತಿ ನೋಡಲಾಗುತ್ತಿರಲಿಲ್ಲ. ತೀವ್ರವಾಗಿ ಗಾಯಗೊಂಡು ನಿತ್ರಾಣಳಾಗಿದ್ದಳು,ಆಕೆಯ ಮೈಗೆ ಪರಚಿದ ಗಾಯಗಳಾಗಿತ್ತು' ಎಂದು ಸಂತ್ರಸ್ತೆ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ಈ ಹೇಳಿಕೆ ಎಫ್ಐಆರ್ ನಲ್ಲಿ ದಾಖಲಾಗಿದೆ.

Leave a Comment