ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಅಮೇರಿಕ ಸೈನಿಕರ ಸಾವಿಗೆ ಕಾರಣರಾದ ಐಸಿಸ್ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗಿದ್ದಾರೆ. ನಿಮ್ಮನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ,ಹುಡುಕಿ ಹೊಡೆದು ಹಾಕುತ್ತೇವೆ ಎಂದು ಪ್ರತೀಕಾರದ ಮಾತನಾಡಿದ್ದಾರೆ.
ವೈಟ್ ಹೌಸ್ ನಲ್ಲಿ ಹೇಳಿಕೆ ನೀಡಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಈ ದಾಳಿ ಮಾಡಿರುವ, ಅಮೆರಿಕಾಗೆ ಕೇಡು ಶಕ್ತಿಗಳು ಇದನ್ನು ಗಮನಿಸಬೇಕು. ನಾವು ನಿಮ್ಮನ್ನು ಕ್ಷಮಿಸುವುದಿಲ್ಲ, ಹಾಗೇ ಮರೆಯುವುದಿಲ್ಲ. ನಿಮ್ಮನ್ನು ಹುಡುಕಿ ಹೊಡೆಯುತ್ತೇವೆ. ನೀವು ಬೆಲೆ ತೆರಲೇಬೇಕು. ನಿಮ್ಮನ್ನು ಬೇಟೆ
ಆಡುತ್ತೆವೆ. ತಕ್ಕ ಶಾಸ್ತಿ ಮಾಡುತ್ತೇವೆ. ನಾವು ತೆರವು ಕಾರ್ಯಾಚರಣೆ ಮುಂದುವರಿಸುವುದಾಗಿ ಹೇಳಿದರು.
ಕಾಬುಲ್ ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ದಾಳಿಯನ್ನು ಅಮೆರಿಕ ಸೇನೆ 13 ಯೋಧರು ಹಾಗೂ 60 ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ. ದಾಳಿಯ ಹೊಣೆಯನ್ನು ಐಸಿಸ್-ಕೆ ಉಗ್ರ ಸಂಘಟನೆ ಹೊತ್ತುಕೊಂಡಿದೆ.














