Coastal Bulletin

ಕಾಬೂಲ್: ಆಗಸ್ಟ್ 31ರೊಳಗೆ ಕಾಬೂಲ್ ತೊರೆಯುವಂತೆ ಅಮೆರಿಕಾ, ಬ್ರಿಟನ್ ಸೇರಿದಂತೆ ಇನ್ನಿತರ ರಾಷ್ಟ್ರಗಳಿಗೆ ತಾಲಿಬಾನ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಭೀಕರ 2 ಸ್ಫೋಟ ಸಂಭವಿಸಿದೆ.ಸ್ಪೋಟದಲ್ಲಿ 13ಕ್ಕೂ ಹೆಚ್ಚು ಜನರು ಸಾವನ್ನಪ್ಪಿರೋದಾಗಿ ಅಮೆರಿಕ ಮಿಲಿಟರಿ ಗುರುವಾರ ದೃಢಪಡಿಸಿದೆ.

ಅಮೆರಿಕಾ, ಬ್ರಿಟನ್ ದೇಶದ ಯೋಧರಿದ್ದ ಹೋಟೆಲ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ ಎನ್ನಲಾಗಿದ್ದು, ಅರ್ಧ ಗಂಟೆ ಅವಧಿಯಲ್ಲಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನದ

ಪಕ್ಕದಲ್ಲಿ ಎರಡು ಸ್ಪೋಟ ಸಂಭವಿಸಿದೆ.ನಿಲ್ದಾಣದ ಗೇಟ್ ಬಳಿ ಒಂದು ಸ್ಫೋಟ ಸಂಭವಿಸಿದ್ದರೆ ಮತ್ತೊಂದು ಸ್ಫೋಟ ವಿಮಾನ ನಿಲ್ದಾಣದ ಹೊರಗೆ ಹೋಟೆಲ್ ಬಳಿ ನಡೆದಿದೆ. 

Leave a Comment