Coastal Bulletin

ಪುತ್ತೂರು : ಪುತ್ತೂರಿನ ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಇರುವ ಗದ್ದೆಯಲ್ಲಿ ಇನ್ನೂ ಮುಂದೆ ಹಿಂದೂ ಭಕ್ತಾಧಿಗಳಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ ನೀಡಿ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ನೀಡಿದೆ.

“ಈ ದೇವಸ್ಥಾನವೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನವಾಗಿದ್ದೂ , ಈ  ದೇವಳಕ್ಕೆ ಸಂಬಂಧಪಟ್ಟ ಜಾಗದಲ್ಲಿ ಹಿಂದೂ ಭಕ್ತಾದಿಗಳಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ ಇರುತ್ತದೆ. ಹಿಂದೂ ಭಕ್ತಾದಿಗಳ

ಹೊರತು ಪಡಿಸಿ ಇತರರು ವಾಹನ ಪಾರ್ಕಿಂಗ್ ಮಾಡಿ ಹೋಗುವುದನ್ನು ಕಡ್ಡಾಯವಾಗಿ ನಿಷೇದಿಸಿದೆ ಹಾಗೂ ಇತರರು ಪಾರ್ಕಿಂಗ್ ಮಾಡಿ ಹೋದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ" ಪ್ಲೆಕ್ಸ್ ಬೋರ್ಡ್’ನಲ್ಲಿ ಪ್ರಕಟಣೆ ಹಾಕಲಾಗಿದೆ.

Leave a Comment