Coastal Bulletin

ಮೆಟ್ರೋ ರೈಲು ನಿಲ್ದಾಣಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತ ಪ್ರಯಾಣಿಕರಿಗೆ ಪ್ರತ್ಯೇಕ ಶೌಚಾಲಯ ಬಳಕೆಗೆ ಅವಕಾಶ ನೀಡಲಾಗಿದೆ. ಇದುವರೆಗೆ ವಿಕಲಚೇತನ ಪ್ರಯಾಣಿಕರಿಗಾಗಿ ಇದ್ದಂತ ಶೌಚಾಲಯಗಳನ್ನು ಲೈಂಗಿಕ ಅಲ್ಪಸಂಖ್ಯಾತರಿಗೂ ಬಳಸಲು ಅವಕಾಶ ನೀಡಲಾಗಿದೆ.

ಈ ಬಗ್ಗೆ ಮಾಹಿತಿ ಹೇಳಿಕೆ ನೀಡಿದ ಡಿಎಂಆರ್‌ಸಿ “ ಲೈಂಗಿಕ ಅಲ್ಪಸಂಖ್ಯಾತರಿಗೆ ಸುರಕ್ಷಿತ ಜಾಗವನ್ನು ಒದಗಿಸಲು ಮತ್ತು ಲಿಂಗ ತಾರತಮ್ಯವನ್ನು ತಡೆಗಟ್ಟುವ ಪ್ರಯತ್ನದಲ್ಲಿ, ದೆಹಲಿ ಮೆಟ್ರೋ ಅವರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಮಾಡಿದೆ. ಇಲ್ಲಿಯವರೆಗೆ ವಿಕಲಾಂಗರಿಗೆ ಮಾತ್ರ ಮೀಸಲಿಟ್ಟಿದ ಶೌಚಾಲಯಗಳು ಇನ್ನು

ಮುಂದೆ ಟ್ರಾನ್ಸ್‌ಜೆಂಡರ್‌ಗಳಿಗೂ ಸಹ ಲಭ್ಯವಿರುತ್ತದೆ.ಪ್ರಸ್ತುತ, ದೆಹಲಿ ಮೆಟ್ರೋ ತನ್ನ ವಿವಿಧ ನಿಲ್ದಾಣಗಳಲ್ಲಿ 347 ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದೆ.ಟ್ರಾನ್ಸ್‌ಜೆಂಡರ್‌ಗಳ ಮಾಹಿತಿಗಾಗಿ , ಇಂಗ್ಲಿಷ್ ಮತ್ತು ಹಿಂದಿ ಎರಡು ಭಾಷೆಗಲ್ಲಿ ವಿಕಲಚೇತನರಿಗೆ ಮತ್ತು ‘ಲೈಂಗಿಕ ಅಲ್ಪಸಂಖ್ಯಾತರಿಗೆ’ ಎಂಬ ಫಲಕಗಳನ್ನು ಶೌಚಾಲಯಗಳ ಪಕ್ಕದಲ್ಲಿ ಅಳವಡಿಸಲಾಗಿದೆ.” ಎಂದಿದೆ

Leave a Comment