ಬಂಟ್ವಾಳ: ಬಂಟ್ವಾಳ ಪುರಸಭೆ ಸದಸ್ಯ ವಾಸು ಪೂಜಾರಿಯವರು ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಬಳಿಕ ಅವರು ಸಾಕಷ್ಟು ಟ್ರೋಲ್ ಆಗಿದ್ದರು. ಇದೀಗ ಎಚ್ಚೆತ್ತ ವಾಸು ಪೂಜಾರಿ ಸರಿಯಾಗಿ ಹಾಡಿದ ದೇಶಭಕ್ತಿ ಗೀತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಬಂಟ್ವಾಳ ಪುರಸಭೆ ಸದಸ್ಯ, ಕಾಂಗ್ರೆಸ್ ಕಾರ್ಯಕರ್ತ ವಾಸು ಪೂಜಾರಿಯವರು ಬಂಟ್ವಾಳ ಲೊರೆಟ್ಟೋಪದವಿನ ನುಸ್ರತ್ತುಲ್ ಇಸ್ಲಾಂ ಯಂಗ್ ಮೆನ್ ಅಸೋಸಿಯೇಷನ್ ಟಿಪ್ಪು ನಗರ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡಿದ ಬಳಿಕ ರಾಷ್ಟ್ರಗೀತೆ ಹಾಡಿದ್ದಾರೆ. ಹಾಡನ್ನು ತಪ್ಪು ತಪ್ಪಾಗಿ ಹಾಡಿ ಸ್ವಾತಂತ್ರ್ಯ ದಿನಾಚರಣೆಗೆ ಬಂದಿದ್ದ ಮಕ್ಕಳು,ಪೋಷಕರ ಎದುರು ನಗೆಪಾಟಲಿಗೀಡಾಗಿದ್ದಾರೆ.
ರಾಷ್ಟ್ರಗೀತೆಯನ್ನು ತಪ್ಪು ತಪ್ಪಾಗಿ ಹಾಡಿದ ಪುರಸಭಾ ಸದಸ್ಯ ವಾಸು
ಪೂಜಾರಿ ಅವರಿಗೂ,ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಅಗೌರವದಿಂದ ನಡೆದುಕೊಂಡ ಸಂಸ್ಥೆಯ ಪದಾಧಿಕಾರಿಗಳಿಗೂ, ರಾಷ್ಟ್ರಗೀತೆಗೆ ಯಾವ ರೀತಿಯಲ್ಲಿ ಶಿಸ್ತಿನಿಂದ ಗೌರವ ಕೊಡಬೇಕೆನ್ನುವ ಪಾಠವನ್ನು ಮಕ್ಕಳಿಗೆ ಕಲಿಸದಿರುವ ಅಲ್ಲಿನ ಶಿಕ್ಷಕರಿಗೂ ಕ್ರಮಕೈಗೋಳ್ಳಬೇಕೆಂದು ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿಬಂದಿತ್ತು.
https://youtube.com/shorts/R0PazVo9AYU?feature=share
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ವಾಸು ಪೂಜಾರಿಯವರು ಜನಗಣಮನ ರಾಷ್ಟ್ರಗೀತೆಯನ್ನು ಸರಿಯಾಗಿ ಕಲಿತು ವಿಡಿಯೋವನ್ನು ಸಾಮಾಜಿಕ ಜಾಲದಲ್ಲಿ ಹರಿಯಬಿಟ್ಟಿದ್ದಾರೆ.














