ಮಂಗಳೂರು: ಸಂಚರಿಸುತ್ತಿದ್ದ ಬಸ್ ಮೇಲೆ ಮೇಲೆಯೇ ಏಕಾಏಕಿ ತೆಂಗಿನ ಮರವೊಂದು ಬಿದ್ದು ಬಸ್ ನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಪಾಯವಿಲ್ಲದೆ ಪಾರಾದ ಘಟನೆ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದಿದೆ.
ಮಲ್ಲಿಕಟ್ಟೆಯ ಸರ್ಕಲ್ ಗೆ ಸುತ್ತು ಹಾಕಿದ ಬಸ್ ನಿಲ್ದಾಣಕ್ಕೆ ಹೋಗುವ ಮೊದಲೇ ಏಕಾಏಕಿ ತೆಂಗಿನ ಮರ ಹೈಟೆನ್ಷನ್ ತಂತಿಯ ಸಹಿತ ಬಸ್ ಮೇಲೆಯೇ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ದುರಂತ
ಸಂಭವಿಸದೆ, ಬಸ್ ನಲ್ಲಿರುವವರು ಪಾರಾಗಿದ್ದಾರೆ.
ತಕ್ಷಣ ಬಸ್ ನಲ್ಲಿರುವ ಪ್ರಯಾಣಿಕರನ್ನು ಬಸ್ ನಲ್ಲಿಂದ ಇಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ತಂಡ ಅಗಮಿಸಿ ಬಸ್ ಮೇಲೆ ಬಿದ್ದ ತೆಂಗಿನ ಮರದ ತೆರವು ಕಾರ್ಯಚರಣೆ ನಡೆಸಿದ್ದಾರೆ.















