ಕೊಟ್ಟಿಂಜ:ಮಾ. 12-13, ಶ್ರೀ ರಾಮ ಮಂದಿರದ 20ನೇ ಪ್ರತಿಷ್ಠಾ ವರ್ಧಂತ್ಯುತ್ಸವ. ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಯಕ್ಷಗಾನ

Coastal Bulletin
ಕೊಟ್ಟಿಂಜ:ಮಾ. 12-13, ಶ್ರೀ ರಾಮ ಮಂದಿರದ 20ನೇ ಪ್ರತಿಷ್ಠಾ ವರ್ಧಂತ್ಯುತ್ಸವ. ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಯಕ್ಷಗಾನ

ಬಂಟ್ವಾಳ :ತಾಲೂಕಿನ ಮೇರಮಜಲು ಗ್ರಾಮದ ಕೊಟ್ಟಿಂಜ ಶ್ರೀ ರಾಮ ಮಂದಿರದ “20ನೇ ಪ್ರತಿಷ್ಠಾ ವರ್ಧಂತ್ಯುತ್ಸವ”ವು ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ಮಾ.12ಹಾಗೂ13ರಂದು ವೈದಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಮಾ.12ನೇ ಗುರುವಾರ ಸಂಜೆ 5:00 ರಿಂದ ಪ್ರಾರ್ಥನೆ ಬಳಿಕ, ಭಜನಾ ಸಂಕೀರ್ತನೆ, ಸಭಾ ಕಾರ್ಯಕ್ರಮ ಸಾಂಸ್ಕೃತಿಕ ವೈವಿದ್ಯ ನಡೆಯಲಿದೆ 

ಮಾ.13ನೇ ಶುಕ್ರವಾರ ಬೆಳಿಗ್ಗೆ 8:ರಿಂದ ವೈಧಿಕ ಕಾರ್ಯಕ್ರಮ, ಗಣಪತಿ ಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಮಧ್ಯಾಹ್ನ 12:00ಕ್ಕೆ ಮಹಾ ಮಂಗಳಾರತಿ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಒಡಿಯೂರು ಶ್ರೀ ಆಶೀರ್ವಚನ ನೀಡಲಿದ್ದು ಡಾ| ಪ್ರಭಾಕರ್ ಭಟ್

ಕಲ್ಲಡ್ಕ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು.ಬಳಿಕ ಅನ್ನ ಸಂತರ್ಪಣೆ ಜರುಗಲಿದೆ 

ಸಂಜೆ 4:30 ರಿಂದ  ಭಜನೆ ಸಂಕೀರ್ತನೆ ರಾತ್ರಿ 7:00ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ, ಪಾವಂಜೆ ಇವರಿಂದ ರಾಮ ರಾಮ ಶ್ರೀರಾಮ ಎಂಬ ಯಕ್ಷಗಾನ ಬಯಲಾಟ ಜರುಗಲಿದೆ ಎಂದು ಮಂದಿರದ ಪ್ರಕಟಣೆ ತಿಳಿಸಿದೆ.



Leave a Comment