Coastal Bulletin

ಕೇರಳ; ಹಿರಿಯ ಮಲಯಾಳಂ ಹಾಸ್ಯ ನಟ ಕೊಚ್ಚು ಪ್ರೇಮನ್ ಎಂದು ಹೆಸರು ಪಡೆದಿದ್ದ ಪ್ರೇಮಕುಮಾರ್ ನಿಧನರಾದರು.

68 ವರ್ಷದ ಪ್ರೇಮಕುಮಾರ್ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರನ್ನು ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ‌ ಆಸ್ಪತ್ರೆಗೆ ಸೇರಿಸಲಾಗಿತ್ತು.

ತಿರುವನಂತಪುರದಲ್ಲಿ ಜನಿಸಿದ ಅವರು, ಪೇಯಾಡಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ತಿರುವನಂತಪುರದ ಮಹಾತ್ಮ ಗಾಂಧಿ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು.

ಪ್ರೇಮಕುಮಾರ್ ರಂಗಭೂಮಿಯಿಂದ ಸಿನಿಮಾಗೆ

ಪಾದಾರ್ಪಣೆ ಮಾಡಿದವರು. ಅವರ‌ ನಟನೆ ಮೂಲಕ ಕೊಚ್ಚು ಪ್ರೇಮನ್ ಎಂದು ಖ್ಯಾತಿ ಪಡೆದಿದ್ದರು.

1979 ರಲ್ಲಿ ‘ಏಝು ನಿರಂಗಲ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೊಚ್ಚು ಪ್ರೇಮನ್ ಮಲಯಾಳಂನ‌ ಯಶಸ್ವೀ ನಟರಲ್ಲಿ ಒಬ್ಬರಾಗಿದ್ದರು. 2021 ರಲ್ಲಿ ಅವರು ಕೊನೆಯ ಚಿತ್ರದಲ್ಲಿ ನಟಿಸಿದ್ದರು.

Leave a Comment