ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಕಲ್ಯಾಣ ನೆರವೇರಿದೆ. ‘ಅನುಶ್ರೀ ಮದುವೆ ಯಾವಾಗ?’ ಅಂತ ಫ್ಯಾನ್ಸ್ ಪದೇ ಪದೇ ಕೇಳುತ್ತಲೇ ಇದ್ದರು. ಆ ಘಳಿಗೆ ಬಂದೇಬಿಟ್ಟಿದೆ. ಇಂದು (ಆಗಸ್ಟ್ 28) ಅನುಶ್ರೀ ವಿವಾಹ ಮಹೋತ್ಸವ ಸಖತ್ ಅದ್ಧೂರಿಯಾಗಿ ಜರುಗಿದೆ. ರೋಷನ್ ಎಂಬುವರನ್ನ ನಟಿ ಕಮ್ ಆಂಕರ್ ಅನುಶ್ರೀ ಮದುವೆಯಾಗಿದ್ದಾರೆ.
ಇವತ್ತು (ಆಗಸ್ಟ್ 28) ಗುರುವಾರ ಬೆಳಗ್ಗೆ 10:56 ಕ್ಕೆ ಇದ್ದ ಶುಭ ಲಗ್ನದಲ್ಲಿ ಅನುಶ್ರೀ - ರೋಷನ್ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದ ತಿಟ್ಟಹಳ್ಳಿ ರೋಡ್ ಬಳಿಯ ‘ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್’ ಎಂಬ ಖಾಸಗಿ ರೆಸಾರ್ಟ್‌ನಲ್ಲಿ ಅನುಶ್ರೀ - ರೋಷನ್ ಕಲ್ಯಾಣ ಗ್ರ್ಯಾಂಡ್ ಆಗಿ ನಡೆದಿದೆ.
ಬೆಳಗ್ಗೆ 10:56ಕ್ಕೆ ಶುಭ ಮುಹೂರ್ತದಲ್ಲಿ ಅನುಶ್ರೀ ಕೊರಳಿಗೆ ರೋಷನ್ ಮಾಂಗಲ್ಯಧಾರಣೆ ಮಾಡಿದರು. ಈ ವೇಳೆ ತಾಳಿಯನ್ನ ಬಿಗಿ ಹಿಡಿದು ಅನುಶ್ರೀ ಭಾವುಕರಾದರು. ಎಮೋಷನಲ್ ಆದ ಅನುಶ್ರೀ ಕಣ್ಣೀರಿಟ್ಟರು. ಪತ್ನಿಯ ಕಣ್ಣಾಲಿಗಳು ಒದ್ದೆಯಾಗಿದ್ದನ್ನ ಕಂಡ ರೋಷನ್.. ಅನುಶ್ರೀ ಅವರನ್ನ ಸಮಾಧಾನ ಪಡಿಸಿ ಕೆನ್ನೆಗೆ ಸಿಹಿ ಮುತ್ತು ನೀಡಿದರು.
ಅನುಶ್ರೀ - ರೋಷನ್ ವಿವಾಹ ಪೂರ್ವ ಶಾಸ್ತ್ರಗಳೂ ಸಹ ಜೋರಾಗಿಯೇ ನಡೆದಿತ್ತು. ಆಗಸ್ಟ್ 27
ರಂದು ಗಣೇಶ ಹಬ್ಬದ ಶುಭ ಸಮಯದಲ್ಲಿ ಅನುಶ್ರೀ - ರೋಷನ್ ಅವರ ಅರಿಶಿನ ಶಾಸ್ತ್ರ ನೆರವೇರಿತ್ತು.
ಯಾರೆಲ್ಲಾ ಹಾಜರಾಗಿದ್ದರು?
ಆಂಕರ್ ಕಮ್ ನಿರೂಪಕಿ ಅನುಶ್ರೀ - ರೋಷನ್ ಮದುವೆಗೆ ನಟ ವಿಜಯ್ ರಾಘವೇಂದ್ರ, ನಟಿ ಸೋನಲ್ ಮಂಥೆರೋ, ಚೈತ್ರಾ ಆಚಾರ್, ಶರಣ್, ನಾದಬ್ರಹ್ಮ ಹಂಸಲೇಖ, ಶ್ವೇತಾ ಚೆಂಗಪ್ಪ ಮುಂತಾದ ತಾರೆಯರು ಹಾಜರಾಗಿ ನವದಂಪತಿಗೆ ಶುಭ ಹಾರೈಸಿದರು.
ಯಾರೀ ರೋಷನ್?
ಅನುಶ್ರೀ ಪತಿ ರೋಷನ್ ಕೊಡಗು ಮೂಲದ ಉದ್ಯಮಿ ಎನ್ನಲಾಗಿದೆ. ಐಟಿ ಹಿನ್ನಲೆ ಹೊಂದಿರುವ ರೋಷನ್.. ರಾಮಮೂರ್ತಿ ಹಾಗೂ ಸಿಸಿಲಿಯಾ ದಂಪತಿಯ ಪುತ್ರ. ಡಾ ರಾಜ್‌ಕುಮಾರ್ ಕುಟುಂಬದ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರಿಗೂ ರೋಷನ್ ಆತ್ಯಾಪ್ತರು.
ಲವ್ ಮ್ಯಾರೇಜ್
ಅಂದ್ಹಾಗೆ, ಅನುಶ್ರೀ - ರೋಷನ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎನ್ನಲಾಗಿದೆ.














