'ಕರಿಮಣಿ' ಧಾರಾವಾಹಿ ನಿರ್ದೇಶಕ ವಿನೋದ್ ಧೋಂಡಾಳೆ ಆತ್ಮಹತ್ಯೆ

Coastal Bulletin
'ಕರಿಮಣಿ' ಧಾರಾವಾಹಿ ನಿರ್ದೇಶಕ ವಿನೋದ್ ಧೋಂಡಾಳೆ ಆತ್ಮಹತ್ಯೆ

ಕನ್ನಡ ಕಿರುತೆರೆ ನಿರ್ದೇಶಕ, ನಿರ್ಮಾಪಕ ವಿನೋದ್‌ ದೋಂಡಾಳೆ (49) ಶನಿವಾರ ಬೆಂಗಳೂರಿನ ನಾಗರಬಾವಿ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕನ್ನಡದ ಅನೇಕ ಧಾರಾವಾಹಿಗಳ ನಿರ್ದೇಶನ, ನಿರ್ಮಾಣ ಮಾಡಿರುವ ವಿನೋದ್ ದೋಂಡಾಳೆ ಅವರು 'ಅಭಿನಯ ತರಂಗ' ಶಾಲೆಯಲ್ಲಿ ವಿನೋದ್ ಅವರು ತರಬೇತಿ ಪಡೆದಿದ್ದರು. ಅವರು 2000ರ ಬ್ಯಾಚ್‌ನ ವಿದ್ಯಾರ್ಥಿ ಆಗಿದ್ದರು. ಈ ಶಾಲೆಯಿಂದ ಬದುಕು ಕಟ್ಟಿಕೊಂಡೆ ಅಂತ ವಿನೋದ್ ಅವರು ಈ ಹಿಂದೆಯೇ ಹೇಳಿದ್ದರು.

ಮೃತ ವಿನೋದ್‌ ಅವರ ಪತ್ನಿ ನೀಡಿರುವ ದೂರು ಆಧರಿಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಲೇಔಟ್‌ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಾಗರಬಾವಿ ಬಳಿಯ ಮಾರುತಿನಗರದಲ್ಲಿ ಮೂರಂತಸ್ತಿನ ಸ್ವಂತ ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ವಿನೋದ್‌ ದೋಂಡಲೆ ವಾಸಿಸುತ್ತಿದ್ದರು.

ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ನಾನ ಮಾಡುವುದಾಗಿ ಮೂರನೇ ಮಹಡಿಯಲ್ಲಿರುವ ಕೊಠಡಿ ತೆರಳಿದ್ದ ಅವರು, ಬಹಳ ಹೊತ್ತು ಹೊರಬಂದಿರಲಿಲ್ಲ. 11 ಗಂಟೆ ಸುಮಾರಿಗೆ ಅವರ ಪತ್ನಿ ಕೊಠಡಿ ಬಳಿ ತೆರಳಿ ನೋಡಿದಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಧೋಂಡಾಲೆ ನೀನಾಸಂ ಸತೀಶ್ ನಟನೆಯ 'ಅಶೋಕ ಬ್ಲಡ್' ಚಿತ್ರದ ನಿರ್ದೇಶಕರಾಗಿದ್ದರು ವಿನೋದ್ ದೋಂಡಾಲೆ. ಅವರ ನಿರ್ದೇಶನದ ಅಶೋಕ್ ಬ್ಲಡ್' ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿಯಿದೆ ಎನ್ನಲಾಗಿದೆ. ಈ ಮೊದಲು 'ಮಿಥುನ, ನನ್ನರಸಿ ರಾಧೆ ಹಾಗೂ ಯಶೋಧೆ' ಸೀರಿಯಲ್‌ಗಳನ್ನು ಸಹ ನಿರ್ದೇಶನ ಮಾಡಿದ್ದರು.

Leave a Comment