Coastal Bulletin

ನಿರ್ದೇಶಕ ಆರ್​ ಚಂದ್ರು ಅವರ ಬರೋಬ್ಬರಿ 4 ವರ್ಷಗಳ ಶ್ರಮದ ಫಲದಿಂದ ‘ಕಬ್ಜ’ ಸಿನಿಮಾ ಸುಮಾರು 4000 ಚಿತ್ರಮಂದಿಗಳಲ್ಲಿ ತೆರೆಕಂಡಿದೆ.

ಕೊರೊನಾ, ಲಾಕ್​ಡೌನ್​ ಇತ್ಯಾದಿ ಹಲವು ಅಡೆತಡೆಗಳು ಎದುರಾದರೂ ಕೂಡ ಅವುಗಳನ್ನು ಮೆಟ್ಟಿನಿಂತು ಕೆಲಸ ಮುಂದುವರಿಸಿ  (ಮಾರ್ಚ್​ 17) ಅದ್ದೂರಿಯಾಗಿ ಎಲ್ಲ ಕಡೆಗಳಲ್ಲಿ ‘ಕಬ್ಜ’ ರಿಲೀಸ್​ ಆಗಿದೆ. ಉಪೇಂದ್ರ, ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಭಿಮಾನಿಗಳು ಅತಿಯಾದ ನಿರೀಕ್ಷೆಯಿಟ್ಟಿರುವ ಈ  ಸಿನಿಮಾ ಬಗ್ಗೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಚಿತ್ರ ತಂಡ ಯಶಸ್ವಿಯಾಗಿದೆ. ಪ್ರೇಕ್ಷಕರ ಪ್ರಕಾರ 3.5/5 ರಿವ್ಯೂ ಪಡೆದಿದೆ ಕಬ್ಜಾ.

ನಟ ಉಪೇಂದ್ರ ಅವರ ವೃತ್ತಿಜೀವನದಲ್ಲಿ ಇದು ಡಿಫರೆಂಟ್​ ಸಿನಿಮಾ. 1970ರ ಸಮಯದಲ್ಲಿ ನಡೆಯುವ ಕಥೆಯಲ್ಲಿ ಅವರು ಗ್ಯಾಂಗ್​ಸ್ಟರ್​ ಪಾತ್ರ ಮಾಡಿದ್ದಾರೆ. ಮೊದಲು ಸೌಮ್ಯವಾಗಿದ್ದು, ನಂತರ  ಅಬ್ಬರಿಸುವ ಆರ್ಕೇಶ್ವರನೆಂಬ ಯುವಕನ ಪಾತ್ರದಲ್ಲಿ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ. ಭಿನ್ನವಾದಂತಹ ಫೈಟಿಂಗ್​ ದೃಶ್ಯಗಳಲ್ಲಿ ಅವರು ಪರಾಕ್ರಮ ಮೆರೆದಿದ್ದಾರೆ.

‘ಕಬ್ಜ’ ಚಿತ್ರಕ್ಕೆ ಹೈಪ್​ ಹೆಚ್ಚಲು ಕಾರಣವಾದ ಪ್ರಮುಖ ಅಂಶಗಳಲ್ಲಿ ಪಾತ್ರವರ್ಗ ಕೂಡ ಒಂದು. ಈ ಚಿತ್ರದಲ್ಲಿ ಉಪೇಂದ್ರ ಜೊತೆ ಕಿಚ್ಚ ಸುದೀಪ್​

ಮತ್ತು ಶಿವರಾಜ್​ಕುಮಾರ್​ ನಟಿಸಿದ್ದಾರೆ ಎಂಬ ನಿರೀಕ್ಷೆಯಿಂದಲೇ ಹೆಚ್ಚಿನ ಮಂದಿ ಚಿತ್ರಮಂದಿರಕ್ಕೆ ಬರುತ್ತಾರೆ. ಅಂಥವರಿಗೆ ಸರ್ಪ್ರೈಸ್​ ಕಾದಿರುತ್ತದೆ. ಪೊಲೀಸ್​ ಕಮಿಷನರ್​ ಪಾತ್ರದಲ್ಲಿ ಸುದೀಪ್​ ಅವರು ಆರಂಭದಲ್ಲೇ ಎಂಟ್ರಿ ನೀಡುತ್ತಾರೆ. ಒಂದು ವಿಶೇಷ ಸನ್ನಿವೇಶದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ. ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​ ಹಾಗೂ ಉಪೇಂದ್ರ ಅವರು ಒಟ್ಟಿಗೆ ಕಾಣಿಸಿಕೊಳ್ಳುವ ದೃಶ್ಯ ಬಂದಾಗ ಪ್ರೇಕ್ಷಕರಿಗೆ ರಿಯಲ್​ ಸರ್ಪ್ರೈಸ್​ ಎದುರಾಗುತ್ತದೆ.

ಉಪೇಂದ್ರ ಅವರು ಈ ಮೊದಲು ಅನೇಕ ಬಾರಿ ಈ ಮಾತನ್ನು ಹೇಳಿದ್ದರು. ತಂತ್ರಜ್ಞರೇ ಈ ಸಿನಿಮಾದ ಹೀರೋಗಳು ಅಂತ ಅವರು ಹೇಳಿಕೆ ನೀಡಿದ್ದರು. ‘ಕಬ್ಜ’ ನೋಡುವಾಗ ಆ ಮಾತು ಹೌದು ಅಂತ ಖಂಡಿತ ಎನಿಸುತ್ತದೆ. ನಿರ್ದೇಶಕ ಆರ್​. ಚಂದ್ರು ಅವರು ಒಂದು ಕಲ್ಪನಾಲೋಕವನ್ನು ತೆರೆದಿಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಕಲಾ ನಿರ್ದೇಶಕ ಶಿವಕುಮಾರ್​ ಕೊಡುಗೆ ನೀಡಿದ್ದಾರೆ. ಛಾಯಾಗ್ರಾಹಕ ಎಜೆ ಶೆಟ್ಟಿ ಅವರು ಎಲ್ಲವನ್ನೂ ಬೆರಗಿನಂತೆ ತೋರಿಸಿದ್ದಾರೆ. ಎಂದಿನಂತೆ ಅಬ್ಬರಿಸುವ ಸಂಗೀತದೊಂದಿಗೆ ರವಿ ಬಸ್ರೂರು ಆವರಿಸಿಕೊಂಡಿದ್ದಾರೆ.

Leave a Comment