Coastal Bulletin

ಬೆಂಗಳೂರಿನ ಜೆ.ಪಿ. ನಗರದಲ್ಲಿ ನಿರ್ಮಾಪಕ ಆನೇಕಲ್​ ಬಾಲರಾಜ್​ ಅವರು ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ ವಾಕಿಂಗ್​ಗೆ ತೆರಳಿದ್ದಾಗ ಸಂಭವಿಸಿದ ಅಪಘಾತದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.

ಭಾನುವಾರ  ಬೆಳಗ್ಗೆ ಜೆ.ಪಿ. ನಗರದ ಅವರ ನಿವಾಸದ ಬಳಿ ವಾಕಿಂಗ್​ಗೆ ತೆರಳಿದ್ದಾಗ ಅಪಘಾತಕ್ಕೊಳಗಾದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿ ಆಗದೇ ಅವರು ನಿಧನರಾಗಿದ್ದಾರೆ ಎಂಬ  ಮಾಹಿತಿ ಲಭ್ಯವಾಗಿದೆ. ಆನೇಕಲ್​ ಬಾಲರಾಜ್ ಅವರಿಗೆ 58 ವರ್ಷ ವಯಸ್ಸಾಗಿತ್ತು.

ಕರಿಯ ಸಿನಿಮಾ

ನಿರ್ಮಾಣ ಮಾಡಿ ಬಾಲರಾಜ್​ ಅವರು ಯಶಸ್ಸು ಕಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಆನೇಕಲ್​ ಬಾಲರಾಜ್​ ಅವರು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. ಪ್ರೇಮ್​ ನಿರ್ದೇಶನದ 'ಕರಿಯಾ', ಶ್ರೀನಿವಾಸ್​ ಪ್ರಭು ನಿರ್ದೇಶನ ಮಾಡಿದ್ದ 'ಕರಿಯಾ 2', 'ಗಣಪ' ಸೇರಿದಂತೆ ಅನೇಕ ಸಿನಿಮಾಗಳನ್ನು ಆನೇಕಲ್​ ಬಾಲರಾಜ್​ ಅವರು ನಿರ್ಮಾಣ ಮಾಡಿದ್ದರು.

Leave a Comment